varthabharthi


ಕ್ರೀಡೆ

ಕೇರಳ ರಣಜಿ ತಂಡದ ಮಾಜಿ ನಾಯಕ ಸತ್ಯೇಂದ್ರನ್ ನಿಧನ

ವಾರ್ತಾ ಭಾರತಿ : 18 Oct, 2020

ಹೈದರಾಬಾದ್: ಕೇರಳದ ರಣಜಿ ತಂಡದ ಮಾಜಿ ನಾಯಕ ಮತ್ತು ಕೋಚ್ ಎ.ಸತ್ಯೇಂದ್ರನ್ ಶುಕ್ರವಾರ ಇಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

  ಸ್ಟೇಟ್ ಬ್ಯಾಂಕ್ ಗ್ರೂಪ್‌ನಲ್ಲಿ ನೌಕರಿ ಕಾರಣದಿಂದಾಗಿ ಹೈದರಾಬಾದ್‌ಗೆ ತೆರಳಿದ್ದ ಸತ್ಯೇಂದ್ರನ್ ಅಲ್ಲೇ ನೆಲೆಸಿದ್ದರು ಅವರ ಆರೋಗ್ಯ ಸ್ವಲ್ಪ ಸಮಯದಿಂದ ಚೆನ್ನಾಗಿರಲಿಲ್ಲ.

 ೇಗದ ಬೌಲರ್ ಸತ್ಯೇಂದ್ರನ್ ಕೇರಳವನ್ನು ಪ್ರತಿನಿಧಿಸಿದ್ದರು. 1970 ಮತ್ತು 80ರ ನಡುವೆ 32 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. ಅವರ ವೃತ್ತಿಜೀವನದ ಅತ್ಯುತ್ತಮ ವೈಯಕ್ತಿಕ ಸ್ಕೋರ್ ಔಟಾಗದೆ 128 ರನ್. ಅವರು ಒಟ್ಟು 1,291 ರನ್ ಗಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)