varthabharthi


ಅಂತಾರಾಷ್ಟ್ರೀಯ

ಮಲಬಾರ್ ನೌಕಾಭ್ಯಾಸದಲ್ಲಿ ಭಾಗವಹಿಸಲಿರುವ ಆಸ್ಟ್ರೇಲಿಯ: ಗಣನೆಗೆ ತೆಗೆದುಕೊಂಡಿದ್ದೇವೆ ಎಂದ ಚೀನಾ

ವಾರ್ತಾ ಭಾರತಿ : 20 Oct, 2020

ಬೀಜಿಂಗ್ (ಚೀನಾ), ಅ. 20: ವಾರ್ಷಿಕ ಮಲಬಾರ್ ನೌಕಾಭ್ಯಾಸದಲ್ಲಿ ಈ ಬಾರಿ ಅಮೆರಿಕ ಮತ್ತು ಜಪಾನ್‌ಗಳ ಜೊತೆಗೆ ಆಸ್ಟ್ರೇಲಿಯವೂ ಭಾಗವಹಿಸುತ್ತದೆ ಎಂಬುದಾಗಿ ಭಾರತ ಮಾಡಿರುವ ಘೋಷಣೆಯನ್ನು ತಾನು ‘ಗಮನಕ್ಕೆ ತೆಗೆದುಕೊಂಡಿರುವುದಾಗಿ’ ಚೀನಾ ಮಂಗಳವಾರ ಹೇಳಿದೆ. ಅದೇ ವೇಳೆ, ಸೇನಾ ಸಹಕಾರವು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಪೂರಕವಾಗಿರಬೇಕು ಎಂದು ಅದು ಅಭಿಪ್ರಾಯಪಟ್ಟಿದೆ.

ಮುಂಬರುವ ಮಲಬಾರ್ ನೌಕಾಭ್ಯಾಸದಲ್ಲಿ ಆಸ್ಟ್ರೇಲಿಯವೂ ಪಾಲ್ಗೊಳ್ಳಲಿದೆ ಎಂಬುದಾಗಿ ಭಾರತ ಸೋಮವಾರ ಘೋಷಿಸಿದೆ. ಆ ಮೂಲಕ ‘ಕ್ವಾಡ್’ (ನಾಲ್ಕು) ದೇಶಗಳ ಎಲ್ಲ ನಾಲ್ವರು ಸದಸ್ಯರು ನೌಕಾಭ್ಯಾಸದಲ್ಲಿ ಪಾಲ್ಗೊಳ್ಳುವಂತಾಗಿದೆ. ನೌಕಾಭ್ಯಾಸವು ಮುಂದಿನ ತಿಂಗಳು ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದಲ್ಲಿ ನಡೆಯುವ ಸಾಧ್ಯತೆಯಿದೆ.

‘‘ದೇಶಗಳ ನಡುವಿನ ಸೇನಾ ಸಹಕಾರವು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಪೂರಕವಾಗಿರಬೇಕು ಎಂಬುದಾಗಿ ನಾವು ಯಾವತ್ತೂ ನಂಬುತ್ತೇವೆ’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಹೆಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)