varthabharthi


ಅಂತಾರಾಷ್ಟ್ರೀಯ

ಅಕ್ರಮ ಹಣ ವರ್ಗಾವಣೆ: ಶೆಹ್ಬಾಝ್ ಶರೀಫ್ ಜೈಲಿಗೆ

ವಾರ್ತಾ ಭಾರತಿ : 21 Oct, 2020

ಲಾಹೋರ್ (ಪಾಕಿಸ್ತಾನ), ಅ. 20: ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಝ್ (ಪಿಎಮ್‌ಎಲ್-ಎನ್) ಪಕ್ಷದ ಅಧ್ಯಕ್ಷ ಹಾಗೂ ನ್ಯಾಶನಲ್ ಅಸೆಂಬ್ಲಿಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಶೆಹ್ಬಾಝ್ ಶರೀಫ್‌ರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಂಗಳವಾರ ಜೈಲಿಗೆ ಕಳುಹಿಸಲಾಗಿದೆ.

700 ಕೋಟಿ ರೂಪಾಯಿ ಭ್ರಷ್ಟಾಚಾರ ಪ್ರಕರಣದಲ್ಲಿ ಅವರ ಜಾಮೀನು ಅರ್ಜಿಯನ್ನು ಸೆಪ್ಟಂಬರ್ 28ರಂದು ನ್ಯಾಯಾಲಯವೊಂದು ತಿರಸ್ಕರಿಸಿದ ಬಳಿಕ, ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ (ಎನ್‌ಎಬಿ) ಅವರನ್ನು ಬಂಧಿಸಿತ್ತು.

ಪಾಕಿಸ್ತಾನದ ಮೂರು ಬಾರಿಯ ಪ್ರಧಾನಿ ನವಾಝ್ ಶರೀಫ್‌ರ ತಮ್ಮನಾಗಿರುವ ಶೆಹ್ಬಾಝ್‌ರನ್ನು ತನ್ನ ವಶಕ್ಕೆ ನೀಡುವಂತೆ ಎನ್‌ಎಬಿ ಮಾಡಿದ ಮನವಿಯನ್ನು ಲಾಹೋರ್‌ನಲ್ಲಿರುವ ಅಕೌಂಟಬಿಲಿಟಿ ನ್ಯಾಯಾಲಯವು ಮಂಗಳವಾರ ತಿರಸ್ಕರಿಸಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)