varthabharthi


ಅಂತಾರಾಷ್ಟ್ರೀಯ

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಮತ ಚಲಾಯಿಸಿದ ಟ್ರಂಪ್

ವಾರ್ತಾ ಭಾರತಿ : 24 Oct, 2020

ವೆಸ್ಟ್ ಪಾಮ್ ಬೀಚ್: ಮತ್ತೊಂದು ಬಿರುಸಿನ ಪ್ರಚಾರಕ್ಕೆ ಸಜ್ಜಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಂಚಿತ ಮತ ಚಲಾಯಿಸಿದರು.

ಫ್ಲೋರಿಡಾದ ಮತದಾನ ಕೇಂದ್ರದಲ್ಲಿ ಟ್ರಂಪ್ ತಮ್ಮಹಕ್ಕು ಚಲಾಯಿಸಿದರು.

"ಈಗಷ್ಟೇ ಮತ ಚಲಾಯಿಸಿದೆ. ಇದೊಂದು ಶ್ರೇಷ್ಟ ಗೌರವ'' ಎಂದು ಟ್ರಂಪ್ ಟ್ವೀಟ್ ಮಾಡಿದರು.

"ನಾನು ಟ್ರಂಪ್ ಹೆಸರಿನ ವ್ಯಕ್ತಿಗೆ ಮತ ಚಲಾಯಿಸಿದೆ'' ಎಂದು ನಸುನಗುತ್ತಾ ಟ್ರಂಪ್ ಸುದ್ದಿಗಾರರಿಗೆ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)