varthabharthi


ಅಂತಾರಾಷ್ಟ್ರೀಯ

ಎಫ್‌ಎಟಿಎಫ್ ‘ಬೂದು ಪಟ್ಟಿ’ಯಲ್ಲೇ ಪಾಕಿಸ್ತಾನ ಮುಂದುವರಿಕೆ

ವಾರ್ತಾ ಭಾರತಿ : 24 Oct, 2020

 ಪ್ಯಾರಿಸ್, ಅ. 24: ಭಯೋತ್ಪಾದನೆಗೆ ಹಣ ಪೂರೈಸುವ ದೇಶಗಳ ಮೇಲೆ ನಿಗಾ ಇಡುವ ಜಾಗತಿಕ ಸಂಸ್ಥೆ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್), ಪಾಕಿಸ್ತಾನವನ್ನು ಮುಂದಿನ ವರ್ಷದ ಫೆಬ್ರವರಿವರೆಗೆ ತನ್ನ ‘ಬೂದು ಪಟ್ಟಿ’ಯಲ್ಲೇ ಮುಂದುವರಿಸಲು ಶುಕ್ರವಾರ ನಿರ್ಧರಿಸಿದೆ.

ಬೂದು ಪಟ್ಟಿಯಲ್ಲಿರುವ ದೇಶಗಳ ಮೇಲೆ ತೀವ್ರ ನಿಗಾ ಇಡಲಾಗುತ್ತದೆ. ಭಯೋತ್ಪಾದನೆಗೆ ಹಣ ಪೂರೈಕೆಯಾಗುವುದನ್ನು ತಡೆಯಲು ಪಾಕಿಸ್ತಾನ ತೆಗೆದುಕೊಂಡಿರುವ ಕ್ರಮಗಳು ಸಮರ್ಪಕವಾಗಿಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ.

ಪಾಕಿಸ್ತಾನವು ತನ್ನ 27 ಅಂಶಗಳ ಬದ್ಧತೆಗಳ ಪೈಕಿ ಆರನ್ನು ಪೂರೈಸಿಲ್ಲ ಹಾಗೂ ಅದು ಇನ್ನೂ ತುಂಬಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಫ್‌ಎಟಿಟಫ್ ತಿಳಿಸಿದೆ ಎಂದು ಮೂಲಗಳು ಹೇಳಿವೆ.

ಎಲ್ಲ ಶರತ್ತುಗಳನ್ನು ಪಾಕಿಸ್ತಾನವು ಪೂರೈಸಿದ ಬಳಿಕವಷ್ಟೇ ಎಫ್‌ಎಟಿಎಫ್ ಅಲ್ಲಿಗೆ ಭೇಟಿ ನೀಡುವುದು ಹಾಗೂ ಆ ಬಳಿಕವಷ್ಟೇ ಅದರ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಲಾಗುವುದು ಎಂದು ಅದು ಹೇಳಿದೆ.

ಈಜಿಪ್ಟ್‌ನಲ್ಲಿ ಸಂಸದೀಯ ಚುನಾವಣೆಯ ಮತದಾನವು ಶನಿವಾರ ಆರಂಭಗೊಂಡಿದ್ದು, ಗಿಝಾ ನಗರದಲ್ಲಿನ ಮತಗಟ್ಟೆಯೊಂದರಲ್ಲಿ ಮಹಿಳೆಯೊಬ್ಬರು ಮುಖಗವಸು ಧರಿಸಿ ಮತ ಚಲಾಯಿಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)