ಅಲಬಾಮ: ನೌಕಾಪಡೆ ವಿಮಾನ ಪತನ; ಇಬ್ಬರು ಪೈಲಟ್ಗಳು ಮೃತ
ಅಲಬಾಮ (ಅಮೆರಿಕ), ಅ. 24: ಅಮೆರಿಕದ ನೌಕಾ ಪಡೆಗೆ ಸೇರಿದ ವಿಮಾನವೊಂದು ಅಲಬಾಮ ನಗರದ ಜನವಸತಿ ಪ್ರದೇಶವೊಂದರ ಬಳಿ ಅಪ್ಪಳಿಸಿದಾಗ ಅದರಲ್ಲಿದ್ದ ಇಬ್ಬರು ಪೈಲಟ್ಗಳು ಮೃತಪಟ್ಟಿದ್ದಾರೆ.
ಎರಡು ಆಸನಗಳ ಟಿ-6ಬಿ ಟೆಕ್ಸಾನ್ ವಿಮಾನವು ಅಪ್ಪಳಿಸಿದಾಗ ಒಂದು ಮನೆ ಮತ್ತು ಹಲವು ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿತು. ಆದರೆ, ನಾಗರಿಕರಿಗೆ ಯಾರಿಗಾದರೂ ಹಾನಿಯಾಗಿದೆಯೇ ಎನ್ನುವುದು ತಕ್ಷಣಕ್ಕೆ ತಿಳಿದಿಲ್ಲ ಎಂದು ನೌಕಾ ಪಡೆ ಅಧಿಕಾರಿಯೊಬ್ಬರು ತಿಳಿಸಿದರು.
Next Story