varthabharthi


ಅಂತಾರಾಷ್ಟ್ರೀಯ

ಸ್ಯಾಮ್‌ಸಂಗ್ ಅಧ್ಯಕ್ಷ ಲೀ ಕುನ್-ಹೀ ನಿಧನ

ವಾರ್ತಾ ಭಾರತಿ : 25 Oct, 2020

ಸಿಯೊಲ್: ಸ್ಯಾಮಸಂಗ್ ಎಲೆಕ್ಟ್ರಾನಿಕ್ಸ್ ಅಧ್ಯಕ್ಷ ಲೀ ಕುನ್-ಹೀ ರವಿವಾರ ತನ್ನ 78ನೇ ವಯಸ್ಸಿನಲ್ಲಿ ನಿಧನರಾದರು ಎಂದು ಕಂಪೆನಿಯು ತಿಳಿಸಿದೆ.

ದಕ್ಷಿಣ ಕೊರಿಯಾ ಕಂಪೆನಿಯನ್ನು ಜಾಗತಿಕ ಟೆಕ್ ಟೈಟಾನ್ ಆಗಿ ಪರಿವರ್ತಿಸಿದ ಕೀರ್ತಿಗೆ ಲೀ ಪಾತ್ರರಾಗಿದ್ದರು. ಲೀ ಅವರ ನಾಯಕತ್ವದಲ್ಲಿ ಸ್ಯಾಮ್‌ಸಂಗ್ ವಿಶ್ವದ ಅತ್ಯಂತ ದೊಡ್ಡ ಸ್ಮಾರ್ಟ್‌ಫೋನ್‌ಗಳು ಹಾಗೂ ಮೊಮೊರಿ ಚಿಪ್‌ಗಳ ಉತ್ಪಾದಕ ಕಂಪೆನಿಯಾಗಿ ಗುರುತಿಸಿಕೊಂಡಿತು ಹಾಗೂ ಸಂಸ್ಥೆಯ ಒಟ್ಟಾರೆ ವಹಿವಾಟು ಇಂದು ದಕ್ಷಿಣ ಕೊರಿಯಾದ ಜಿಡಿಪಿಯ ಐದನೇಒಂದು ಭಾಗಕ್ಕೆ ಸಮನಾಗಿದೆ.

ಏಕಾಂಗಿ ಜೀವನ ಶೈಲಿಯನ್ನು ಇಷ್ಟಪಡುತ್ತಿದ್ದ ಲೀ ಅವರಿಗೆ 2014ರಲ್ಲಿ ಹೃದಯಾಘಾತವಾದ ಬಳಿಕ ಹಾಸಿಗೆ ಹಿಡಿದಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)