ಕೊಹ್ಲಿ ಅರ್ಧಶತಕ: ಚೆನ್ನೈಗೆ ಗೆಲುವಿಗೆ 146 ರನ್ ಗುರಿ ನೀಡಿದ ಆರ್ಸಿಬಿ
ದುಬೈ: ಶಿಸ್ತುಬದ್ಧ ಬೌಲಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಾಧಾರಣ ಮೊತ್ತ ದಾಖಲಿಸಿದ್ದು, ಚೆನ್ನೈ ಗೆಲುವಿಗೆ 146 ರನ್ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ 145/6 ಗಳಿಸಿತು.
ನಾಯಕ ವಿರಾಟ್ ಕೊಹ್ಲಿ 43 ಎಸೆತಗಳಲ್ಲಿ 50 ರನ್ ಹಾಗೂ ಎಬಿಡಿ ವಿಲಿಯರ್ಸ್ 36 ಎಸೆತಗಳಲ್ಲಿ 39 ರನ್ ಬಾರಿಸಿದರು.
ಚೆನ್ನೈ ಪರ ಸ್ಯಾಮ್ ಕರ್ರನ್ 3, ದೀಪಕ್ ಚಾಹರ್ 2 ವಿಕೆಟ್ ಪಡೆದರು.
Next Story