varthabharthi


ಕರಾವಳಿ

ಬೆಳ್ತಂಗಡಿ: ಎಸ್ ವೈಎಸ್ ವತಿಯಿಂದ ಉಸ್ತಾದರಿಗೆ ದಿನಸಿ ಕಿಟ್ ವಿತರಣೆ

ವಾರ್ತಾ ಭಾರತಿ : 25 Oct, 2020

ಬೆಳ್ತಂಗಡಿ: ಕೊರೋನ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದ ಜಿಲ್ಲೆಯ ಉಸ್ತಾದರಿಗೆ ಮಂಗಳೂರಿನ ಉದ್ಯಮಿಯೋರ್ವರ ಸಹಕಾರದಿಂದ ಎಸ್.ವೈ.ಎಸ್ ದ.ಕ ವತಿಯಿಂದ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ವಿತರಿಸಲಾಗುತ್ತಿದ್ದು, ಇದರ ಭಾಗವಾಗಿ ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯಲ್ಲಿ ಉಸ್ತಾದರಿಗೆ ಆಹಾರ ಕಿಟ್ ಗಳನ್ನು ವಿತರಣೆ ಮಾಡಲಾಯಿತು.

ಅಹಾರ ಕಿಟ್ ವಿತರಣೆ ಕಾರ್ಯಕ್ಕೆ ಬೆಳ್ತಂಗಡಿಯ ಸೂಪರ್ ಬಝಾರ್ ಅಂಗಡಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಬೆಳ್ತಂಗಡಿ ವಲಯ ಎಸ್ಕೆಎಸ್ಸೆಸ್ಸೆಎಫ್ ಅಧ್ಯಕ್ಷ ನಝೀರ್ ಅಝ್ಹರಿ ಮತ್ತು ಬೆಳ್ತಂಗಡಿ ರೇಂಜ್ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ದಾರಿಮಿ ಅವರು ಸೂಪರ್ ಬಝಾರ್ ಗೆ ಭೇಟಿ ನೀಡಿ ಮಾಲಕರಾದ ಮುಹಮ್ಮದ್ ಹಾಜಿಯವರಿಗೆ ಆಹಾರ ಸಾಮಗ್ರಿಗಳ ಬಿಲ್ ಮೊತ್ತವನ್ನು ನೀಡಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ದಾರುಸ್ಸಲಾಮ್ ಸಂಸ್ಥೆಯ ಮ್ಯಾನೇಜರ್ ಬಶೀರ್ ದಾರಿಮಿ, ಅಲ್ತಾಫ್, ಯಾಸಿರ್ ಉಪಸ್ಥಿತರಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)