varthabharthi


ಕ್ರೀಡೆ

ಅಮೋಘ ಕ್ಯಾಚ್ ಮೂಲಕ ಮೂಕವಿಸ್ಮಿತಗೊಳಿಸಿದ ಆರ್ಚರ್

ವಾರ್ತಾ ಭಾರತಿ : 25 Oct, 2020

ದುಬೈ:ರಾಜಸ್ಥಾನ ರಾಯಲ್ಸ್ ಬೌಲರ್ ಜೋಫ್ರಾ ಆರ್ಚರ್ ಬೌಂಡರಿ ಲೈನ್‌ನಲ್ಲಿ ಅದ್ಭುತ ಕ್ಯಾಚ್ ಪಡೆದು  ಸಹ ಆಟಗಾರರನ್ನು ಮೂಕವಿಸ್ಮಿತಗೊಳಿಸಿದರು.

  ಒಂದೇ ಕೈಯಲ್ಲಿ ಕ್ಯಾಚ್ ಪಡೆದ ಇಂಗ್ಲೆಂಡ್ ಆಟಗಾರ ಆರ್ಚರ್ 37 ರನ್ ಗಳಿಸಿದ್ದ ಇಶಾನ್ ಕಿಶನ್‌ರನ್ನು ಪೆವಿಲಿಯನ್‌ಗೆ ಕಳುಹಿಸಲು ನೆರವಾದರು. ಕಾರ್ತಿಕ್ ತ್ಯಾಗಿ ಅವರ ಶಾರ್ಟ್ ಎಸೆತವನ್ನು ಇಶಾನ್ ಕಟ್ ಮಾಡಲು ಯತ್ನಿಸಿದಾಗ ಚೆಂಡು ನೇರವಾಗಿ ಆರ್ಚರ್‌ರತ್ತ ಸಾಗಿತು. ಆರಂಭದಲ್ಲಿ ಗಲಿಬಿಲಿಯಾದ ಆರ್ಚರ್ ಬಳಿಕ ಐಪಿಎಲ್‌ನಲ್ಲಿ ಒಂದು ಶ್ರೇಷ್ಠ ಕ್ಯಾಚ್ ಪಡೆದು ಗಮನ ಸೆಳೆದರು.

ಆರ್ಚರ್ ಅವರ ಅದ್ಭುತ ಕ್ಯಾಚ್ ಸಹ ಆಟಗಾರರಾದ ರಿಯಾನ್ ಪರಾಗ್ ಹಾಗೂ ಕಾರ್ತಿಕ್ ತ್ಯಾಗಿ ಅವರಿಗೆ ನಂಬಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಟಾಸ್ ಜಯಿಸಿದ್ದ ಮುಂಬೈ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದು, ಮುಂಬೈ ಇಂಡಿಯನ್ಸ್ 5 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)