varthabharthi


ಕ್ರೀಡೆ

ಸ್ಟೋಕ್ಸ್, ಸ್ಯಾಮ್ಸನ್ ಆಟಕ್ಕೆ ಕಂಗಾಲಾದ ಮುಂಬೈ: ರಾಜಸ್ಥಾನ್ ಗೆ 8 ವಿಕೆಟ್ ಗಳ ಭರ್ಜರಿ ಗೆಲುವು

ವಾರ್ತಾ ಭಾರತಿ : 25 Oct, 2020

ಅಬುಧಾಬಿ: ಬೆನ್ ಸ್ಟೋಕ್ಸ್ ಹಾಗೂ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್ ಗಳ ಗೆಲುವು ಸಾಧಿಸಿದೆ.

ಗೆಲುವಿಗೆ 196 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ರಾಜಸ್ಥಾನ್ 18.2 ಓವರ್ ಗಳಲ್ಲಿ ಗುರಿ ತಲುಪಿತು. ಆರಂಭಿಕ ಆಟಗಾರ ಬೆನ್ ಸ್ಟೋಕ್ಸ್ (107 ರನ್, 60 ಎಸೆತ, 14 ಬೌಂಡರಿ, 3 ಸಿಕ್ಸರ್) ಸಂಜು ಸ್ಯಾಮ್ಸನ್ (54 ರನ್, 31 ಎಸೆತ, 4ಬೌಂಡರಿ, 3 ಸಿಕ್ಸರ್) ರನ್ ಸಿಡಿಸಿದರು.

ಬೆನ್ ಸ್ಟೋಕ್ಸ್ ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಇವರಿಗೆ ಸ್ಯಾಮ್ಸನ್ ಕೂಡ ಅಗತ್ಯ ಸಾಥ್ ನೀಡಿದರು. ಮುಂಬೈ ಬೌಲರ್‌ಗಳನ್ನು ದಂಡಿಸಿದ ಈ ಜೋಡಿ ಯಾವುದೇ ಹಂತದಲ್ಲೂ ಅಪಾಯವಾಗದಂತೆ ಎಚ್ಚರ ವಹಿಸಿತು. ಸತತ ಸೋಲುಗಳಿಂದ ಕಂಗೆಟ್ಟಿದ್ದ ತಂಡಕ್ಕೆ ಈ ಜೋಡಿ ಸುಲಭ ಗೆಲುವು ದಾಖಲಿಸಲು ನೆರವಾಯಿತು.

ಮುಂಬೈ ಪರ ಜೇಮ್ಸ್ ಪ್ಯಾಟಿನ್ಸನ್ 2 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ ತಂಡ, ಹಾರ್ದಿಕ್ ಪಾಂಡ್ಯ‌ (60 ರನ್, 21 ಎಸೆತ, 2 ಬೌಂಡರಿ, 7 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ಫಲವಾಗಿ 5 ವಿಕೆಟ್‌ಗೆ 195 ರನ್ ಕಲೆಹಾಕಿತು. 

ಇಶಾನ್ ಕಿಶಾನ್ 37, ಸೂರ್ಯಕುಮಾರ್ ಯಾದವ್ 40, ಸೌರಭ್ ತಿವಾರಿ 34 ರನ್ ಬಾರಿಸಿದರು.

ರಾಜಸ್ಥಾನ್ ಪರ ಜೋಫ್ರಾ ಅರ್ಚರ್ ಹಾಗೂ ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಪಡೆದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)