varthabharthi


ಗಲ್ಫ್ ಸುದ್ದಿ

ಡಿಕೆಎಸ್‌ಸಿ ಕುವೈತ್ ರಾಷ್ಟ್ರೀಯ ಸಮಿತಿಗೆ ಆಯ್ಕೆ

ವಾರ್ತಾ ಭಾರತಿ : 26 Oct, 2020

ಕುವೈತ್, ಅ.26: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿಕೆಎಸ್‌ಸಿ)ನ ಕುವೈತ್ ರಾಷ್ಟ್ರೀಯ ಸಮಿತಿ ಪುನಾರಚನಾ ಸಭೆ ಝೂಮ್ ಆನ್‌ಲೈನ್ ಮೂಲಕ ಇತ್ತೀಚೆಗೆ ನಡೆಸಲಾಯಿತು.

ಕೇಂದ್ರ ಸಮಿತಿಯ ಅಧ್ಯಕ್ಷ ಕುಂಬೋಳ್ ಅಸ್ಸೈಯದ್ ಕೆ.ಎಸ್.ಆಟಕೋಯ ತಂಙಳ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯೂಸುಫ್ ಹಾಜಿ ಮಂಚಕಲ್ ಕಿರಾಅತ್ ಪಠಿಸಿದರು. ಕೇಂದ್ರ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಅಬ್ದುಲ್ ಹಮೀದ್ ಅರಾಮೆಕ್ಸ್ ಉದ್ಘಾಟನೆ ನೆರವೇರಿಸಿ, ಡಿಕೆಎಸ್‌ಸಿಯ ಮಹತ್ವವನ್ನು ವಿವರಿಸಿದರು. ಮೂಳೂರು ಮರ್ಕಝ್ ಮ್ಯಾನೇಜರ್ ಮುಸ್ತಫ ಸಅದಿ ಮರ್ಕಝ್‌ನ ಕಿರು ಪರಿಚಯ ನೀಡಿದರು. ಬಳಿಕ 2020-21ನೆ ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಯೂಸುಫ್ ಅಬ್ಬಾಸ್ ಹಾಜಿ ಮಂಚಕಲ್, ಪ್ರಧಾನ ಕಾರ್ಯದರ್ಶಿಯಾಗಿ ಲಿಯಾಖತ್ ಗಂಗಾವಳಿ, ಕೋಶಾಧಿಕಾರಿಯಾಗಿ ಅಬ್ದುಲ್ಲತೀಫ್ ಮುಳರಪಟ್ಣ, ಲೆಕ್ಕ ಪರಿಶೋಧಕರಾಗಿ ಹನೀಫ್ ನೇಜಾರು, ಉಪಾಧ್ಯಕ್ಷರಾಗಿ ಶೌಕತ್ ಶಿರ್ವ ಹಾಗೂ ಹಸನ್ ಕನ್ನಂಗಾರ್, ಕಾರ್ಯದರ್ಶಿಗಳಾಗಿ ನವಾಝ್ ಮುಲ್ಲರಪಟ್ಣ ಹಾಗೂ ಅನ್ವರ್ ಕೈಕಂಬ, ಸಲಹೆಗಾರರಾಗಿ ಮುಹಮ್ಮದ್ ರಫೀಕ್ ಮಂಚಿ ಹಾಗೂ ಅಬ್ದುಲ್ ರಹ್ಮಾನ್ ಸಖಾಫಿ ಆಯ್ಕೆಯಾಗಿದ್ದಾರೆ.

ಡಿಕೆಎಸ್‌ಸಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಹಾತಿಂ ಕಂಚಿ, ಪ್ರಧಾನ ಕಾರ್ಯದರ್ಶಿ ಹಸನ್ ಮೂಡುತೋಟ, ಕೋಶಾಧಿಕಾರಿ ಸುಲೈಮಾನ್ ಸೂರಿಂಜೆ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಅಝೀಝ್ ಆತೂರು, ಉಪಾಧ್ಯಕ್ಷರಾದ ರಫೀಕ್ ಸೂರಿಂಜೆ, ಅಬೂಬಕರ್ ಪಡುಬಿದ್ರೆ, ಇಮ್ತಿಯಾಝ್ ಕುಂದಾಪುರ, ಸಿಲ್ವರ್ ಜುಬಿಲಿ ಚೇರ್‌ಮೆನ್ ಅಸ್ಸೈಯದ್ ಮುಹಮ್ಮದ್ ತಂಙಳ್ ಉಚ್ಚಿಲ, ಕೋಶಾಧಿಕಾರಿ ಹಾತಿಂ ಕೂಳೂರು, ದಮ್ಮಾಮ್ ಝೋನ್ ಅಧ್ಯಕ್ಷ ಹಸನ್ ಕುಪ್ಪೆಪದವು, ರಿಯಾದ್ ಝೋನ್ ಅಧ್ಯಕ್ಷ ಇಸ್ಮಾಯೀಲ್ ಕನ್ನಂಗಾರ್, ಮಾಜಿ ಅಧ್ಯಕ್ಷ ಅಬ್ದುಲ್ ಅಝೀಝ್ ಬಜ್ಪೆ, ಮಕ್ಕಾ ಝೋನ್ ಅಧ್ಯಕ್ಷ ಇಬ್ರಾಹೀಂ ಕನ್ನಂಗಾರ್, ಯುಎಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಇಕ್ಬಾಲ್ ಕನ್ನಂಗಾರ್, ಒಮನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಮೋನಬ್ಬ ಅಬ್ದುಲ್ ರಹ್ಮಾನ್, ಬಹರೈನ್ ರಾಷ್ಟ್ರೀಯ ಸಮಿತಿಯ ಮುಖಂಡ ಮುಹಮ್ಮದ್ ಸೀದಿ, ಅಧ್ಯಕ್ಷ ಅಬ್ದುಲ್ ಮಜೀದ್ ಸಅದಿ, ಖತರ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಸುಲೈಮಾನ್ ಮುಂಡ್ಕೂರು, ತುಖ್ಬಾ ಘಟಕದ ಅಧ್ಯಕ್ಷ ಅಝೀಝ್ ಮೂಳೂರು ಹಾಗೂ ಇತರರು ಉಪಸ್ಥಿತರಿದ್ದರು.

ಶೌಕತ್ ಶಿರ್ವ ಸ್ವಾಗತಿಸಿದರು. ಕುವೈತ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಲಿಯಾಖತ್ ಗಂಗಾವಳಿ ವಂದಿಸಿದರು. ದಾವೂದ್ ಕಜಮಾರ್ ಕಾರ್ಯಕ್ರಮ ನಿರೂಪಿಸಿದರು 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)