varthabharthi


ಅಂತಾರಾಷ್ಟ್ರೀಯ

ಸಿರಿಯ: ಬಂಡುಕೋರ ನೆಲೆಗಳ ಮೇಲೆ ರಶ್ಯ ವಾಯುದಾಳಿ; 50 ಮಂದಿ ಮೃತ್ಯು

ವಾರ್ತಾ ಭಾರತಿ : 27 Oct, 2020

ಬೈರೂತ್,ಅ.26: ವಾಯವ್ಯ ಸಿರಿಯದಲ್ಲಿ ಬಂಡುಕೋರರ ತರಬೇತಿ ಕೇಂದ್ರವೊಂದರ ಮೇಲೆ ಸೋಮವಾರ ರಶ್ಯ ನಡೆಸಿದ ವಾಯುದಾಳಿಯಲ್ಲಿ 50ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

   ಇದ್ಲಿಬ್ ಪ್ರಾಂತದಲ್ಲಿರುವ ಬಂಡುಕೋರರ ತರಬೇತಿ ಕೇಂದ್ರವನ್ನು ಗುರಿಯಿರಿಸಿ ರಶ್ಯ ವಾಯುದಾಳಿ ನಡೆಸಿದೆಯೆಂದು  ಟರ್ಕಿ ಬೆಂಬಲಿತ ಸಿರಿಯನ್ ಪ್ರತಿಪಕ್ಷಗಳ ವಕ್ತಾರ ಯೂಸುಫ್ ಮುಹಮ್ಮದ್ ತಿಳಿಸಿದ್ದಾರೆ.

ವಾಯುದಾಳಿಯಲ್ಲಿ ಕನಿಷ್ಠ 56 ಮಂದಿ ಮೃತಪಟ್ಟಿದ್ದು , ಸುಮಾರು 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿರುವುದಾಗಿ ಬ್ರಿಟನ್‌ನಿಂದ ಕಾರ್ಯಾಚರಿಸುತ್ತಿರುವ ಸಿರಿಯನ್ ಆಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)