varthabharthi


ಅಂತಾರಾಷ್ಟ್ರೀಯ

ಸೆಶಲ್ಸ್ ಅಧ್ಯಕ್ಷೀಯ ಚುನಾವಣೆ: ಭಾರತೀಯ ಮೂಲದ ರಾಮ್‌ಕಲವಾನ್ ಜಯಭೇರಿ

ವಾರ್ತಾ ಭಾರತಿ : 27 Oct, 2020

ಫೋಟೊ ಕೃಪೆ: twitter.com

ವಿಕ್ಟೋರಿಯಾ,ಅ.26: ಹಿಂದೂ ಮಹಾಸಾಗರದ ದ್ವೀಪಸಮೂಹ ರಾಷ್ಟ್ರವಾದ ಸೆಶೆಲ್ಸ್‌ನ ನೂತನ ಅಧ್ಯಕ್ಷರಾಗಿ ಭಾರತ ಮೂಲದ ವಾವೆಲ್ ರಾಮ್‌ಕಾಲವನ್ ಆಯ್ಕೆಯಾಗಿದ್ದಾರೆ.

ಆಂಗ್ಲಿಕನ್ ಚರ್ಚ್‌ನ ಮಾಜಿ ಧರ್ಮಗುರುವಾದ ರಾಮ್‌ಕಲವನ್ ಅವರು ಹಾಲಿ ಅಧ್ಯಕ್ಷ ಡ್ಯಾನಿ ಫೌರೆ ಅವರನ್ನು ಸೋಲಿಸಿದ್ದಾರೆ. ರಾಮ್‌ಕಲವಾನ್ ಅವರಿಗೆ 54.9 ಶೇಕಡ ಮತಗಳು ದೊರೆತಿದ್ದರೆ, ಫೌರೆ ಅವರಿಗೆ 43.5 ಶೇಕಡ ಮತಗಳು ಲಭ್ಯವಾಗಿವೆ. ಭಾರತೀಯ ಸಂಜಾತ ರಾಮ್‌ಕಲವಾನ್ ಮೂಲತಃ ಬಿಹಾರದವರು.

ಸೆಶಲ್ಸ್ ಅಧ್ಯಕ್ಷೀಯ ಚುನಾವಣೆಗೆ ಮತದಾನ ಗುರುವಾರದಿಂದ ಶನಿವಾರದವರೆಗೆ ನಡೆದತ್ತು.

ಬ್ರಿಟಿಶ್ ವಸಾಹತು ಪ್ರದೇಶವಾಗಿದ್ದ ಸೆಶಲ್ಸ್ 1976ರಲ್ಲಿ ಸ್ವತಂತ್ರವಾಗಿತ್ತು. 1977 ರಬಳಿಕ ಇದೇ ಮೊದಲ ಬಾರಿಗೆ ಪ್ರತಿಪಕ್ಷಗಳು ಅಧಿಕಾರಕ್ಕೇರುವಲ್ಲಿ ಸಫಲವಾಗಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)