ಪೇಶಾವರ: ಮದರಸದಲ್ಲಿ ಸ್ಫೋಟ; ಕನಿಷ್ಠ 7 ಮಂದಿ ಸಾವು
ಪೇಶಾವರ (ಪಾಕಿಸ್ತಾನ), ಅ. 27: ವಾಯುವ್ಯ ಪಾಕಿಸ್ತಾನದ ನಗರ ಪೇಶಾವರದ ಧಾರ್ಮಿಕ ಶಾಲೆಯೊಂದರ ಮೇಲೆ ಮಂಗಳವಾರ ನಡೆದ ಬಾಂಬ್ ದಾಳಿಯಲ್ಲಿ ಕನಿಷ್ಠ ಏಳು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಹಾಗೂ 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೇಶಾವರದಲ್ಲಿರುವ ಮದರಸವೊಂದರಲ್ಲಿ 60ಕ್ಕೂ ಅಧಿಕ ವಿದ್ಯಾರ್ಥಿಗಳು ಕುರ್ಆನ್ ಅಧ್ಯಯನದಲ್ಲಿ ತೊಡಗಿದ್ದಾಗ ದಾಳಿ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘‘ಅಪರಿಚಿತ ವ್ಯಕ್ತಿಯೊಬ್ಬ ಮದರಸದ ಒಳಗೆ ಚೀಲವೊಂದನ್ನು ತಂದು ಇಟ್ಟು ಹೋದನು. ಅವನು ಹೋದ ಕೆಲವೇ ಸೆಕೆಂಡ್ಗಳಲ್ಲಿ ಭೀಕರ ಸ್ಫೋಟ ಸಂಭವಿಸಿತು ಎಂದು ಅವರು ನುಡಿದರು.
ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಅದರ ಸದ್ದು ಪೇಶಾವರದ ಹೆಚ್ಚಿನ ಭಾಗಗಳಲ್ಲಿ ಅನುರಣಿಸಿತು.
Next Story