varthabharthi


ಕರಾವಳಿ

ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ರಾಹುಲ್ ಅಗರ್ವಾಲ್ ಅಧಿಕಾರ ಸ್ವೀಕಾರ

ವಾರ್ತಾ ಭಾರತಿ : 27 Oct, 2020

ಮಂಗಳೂರು, ಅ.27: ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಹೊಸ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ರಾಹುಲ್ ಅಗರ್ವಾಲ್ ಮೈಸೂರಿನಲ್ಲಿಂದು ಅಧಿಕಾರ ಸ್ವೀಕರಿಸಿದರು.

1992 ವರ್ಷದ ಭಾರತೀಯ ರೈಲ್ವೆ ಸಂಚಾರ ಸೇವಾ ಅಧಿಕಾರಿ (ಐ.ಆರ್.ಟಿ.ಎಸ್.)ಯಾಗಿ ನಿಯುಕ್ತಿಯಾಗಿದ್ದ ಅವರು, ರೂರ್ಕಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ ಹಾಗು ಅದೇ ಸಂಸ್ಥೆಯಿಂದಲೇ ಥರ್ಮಲ್ ಎಂಜಿನಿಯರಿಂಗ್‌ನಲ್ಲಿ ತಮ್ಮ ಎರಡನೇ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಇವರು ನವದೆಹಲಿಯ ರೈಲ್ವೆ ಮಂಡಳಿಯಲ್ಲಿ ಸಂಚಾರ ಸಾರಿಗೆ (ಉಕ್ಕು) ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮತ್ತು ಉತ್ತರ ಕೇಂದ್ರ ರೈಲ್ವೆ ಯಲ್ಲಿ ಮುಖ್ಯ ಪ್ರಯಾಣಿಕರ ಸಂಚಾರ ವ್ಯವಸ್ಥಾಪಕರಾಗಿ ಹಾಗು ಸರಕು ಮಾರಾಟ ವಿಭಾಗದ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಅಗರ್ವಾಲ್ ತಮ್ಮ ಸೇವೆಗಾಗಿ 2013 ರಲ್ಲಿ ರೈಲ್ವೆ ಸಚಿವರ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇಂದು ಕಚೇರಿಯನ್ನು ಹಸ್ತಾಂತರಿಸಿದ ಅಪರ್ಣ ಗರ್ಗ್ ಬೆಂಗಳೂರಿನ ಯಲಹಂಕ ರೈಲ್ವೆ ಗಾಲಿ ಕಾರ್ಖಾನೆಯಲ್ಲಿ ಪ್ರಧಾನ ಹಣಕಾಸು ಸಲಹೆಗಾರರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)