ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕೊರೋನ ಪಾಸಿಟಿವ್
ಹೊಸದಿಲ್ಲಿ: ಕೇಂದ್ರದ ಜವಳಿ, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಖಾತೆಯ ಸಚಿವೆ ಸ್ಮೃತಿ ಇರಾನಿಗೆ ಕೊರೋನ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ವಿಚಾರವನ್ನು ಅವರು ಬುಧವಾರ ಸ್ವತಃ ಟ್ವೀಟ್ ಮುಖಾಂತರ ಖಚಿತಪಡಿಸಿದ್ದಾರೆ.
"ನನಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ಆದಷ್ಟು ಬೇಗನೆ ಪರೀಕ್ಷಿ ಮಾಡಿಸಿಕೊಳ್ಳಿ' ಎಂದು ಇರಾನಿ ಟ್ವೀಟಿಸಿದ್ದಾರೆ.
ಭಾರತದಲ್ಲಿ ಬುಧವಾರ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆಯು 80 ಲಕ್ಷ ಸನಿಹ ತಲುಪಿದೆ. ಬುಧವಾರ ಒಂದೇ ದಿನ 43, 893 ಹೊಸ ಪ್ರಕರಣಗಳು ಪತ್ತೆಯಾಗಿದೆ.
Next Story