varthabharthi


ಅಂತಾರಾಷ್ಟ್ರೀಯ

ಶ್ರೀಲಂಕಾ ಅಧ್ಯಕ್ಷ ಗೋತಬಯ- ಅಮೆರಿಕ ವಿದೇಶ ಕಾರ್ಯದರ್ಶಿ ಪಾಂಪಿಯೊ ಮಾತುಕತೆ

ವಾರ್ತಾ ಭಾರತಿ : 28 Oct, 2020

ಕೊಲಂಬೊ (ಶ್ರೀಲಂಕಾ), ಅ. 28: ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಬುಧವಾರ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸರನ್ನು ಭೇಟಿಯಾದರು. ಈ ಭೇಟಿಯ ವೇಳೆ ಉಭಯ ನಾಯಕರು, ಪಾರದರ್ಶಕ ವ್ಯಾಪಾರ ಮತ್ತು ಹೂಡಿಕೆ ಆಧಾರಿತ ಆರ್ಥಿಕ ಭಾಗೀದಾರಿಕೆ ಸೇರಿದಂತೆ ಹಲವಾರು ದ್ವಿಪಕ್ಷೀಯ ವಿಷಯಗಳು, ಕೋವಿಡ್-19 ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಉಭಯ ದೇಶಗಳು ಹೊಂದಿರುವ ಬದ್ಧತೆಗಳ ಬಗ್ಗೆ ಚರ್ಚಿಸಿದರು.

 ಎರಡು ದಿನಗಳ ಭೇಟಿಗಾಗಿ ಮಂಗಳವಾರ ಭಾರತದಿಂದ ಶ್ರೀಲಂಕಾಗೆ ಆಗಮಿಸಿದ ಪಾಂಪಿಯೊ, ದೇಶದ ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವಲಯದಲ್ಲಿ ಚೀನಾದ ಬೆಳೆಯುತ್ತಿರುವ ಪ್ರಾಬಲ್ಯವನ್ನು ನಿಯಂತ್ರಿಸಲು ಅಮೆರಿಕ ಬಯಸಿದ್ದು, ಶ್ರೀಲಂಕಾಕ್ಕೆ ಪಾಂಪಿಯೊ ನೀಡಿರುವ ಭೇಟಿಯು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಪಾಂಪಿಯೊ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸರನ್ನು ಭೇಟಿಯಾಗಿ ಮಾತುಕತೆ ನಡೆಸಿದರು ಎಂದು ಅಧ್ಯಕ್ಷರ ಮಾಧ್ಯಮ ಇಲಾಖೆಯು ತಿಳಿಸಿದೆ.

ಬಳಿಕ ಅವರು, ಶ್ರೀಲಂಕಾದ ವಿದೇಶ ಸಚಿವ ದಿನೇಶ್ ಗುಣವರ್ಧನರನ್ನು ಭೇಟಿಯಾದರು ಎಂದು ವರದಿಗಳು ಹೇಳಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)