ಪಡಿಕ್ಕಲ್ ಆಕರ್ಷಕ ಅರ್ಧಶತಕ: ಆರ್ಸಿಬಿ ಎದುರು ಮುಂಬೈ ಗೆಲುವಿಗೆ 165 ರನ್ ಗುರಿ
ಅಬುಧಾಬಿ: ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ಎದುರು ಉತ್ತಮ ಮೊತ್ತ ದಾಖಲಿಸಿದ್ದು, ಮುಂಬೈ ಗೆಲುವಿಗೆ 165 ರನ್ ಗಳ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ 164/6 ರನ್ ಗಳಿಸಿತು.
ಆರಂಭಿಕ ಆಟಗಾರರಾದ ಜೋಶ್ ಪಿಲಿಪ್ಪೆ ಹಾಗೂ ದೇವದತ್ತ ಪಡಿಕ್ಕಲ್ ಉತ್ತಮ ಆರಂಭ ಒದಗಿಸಿ ತಂಡಕ್ಕೆ ಆಸರೆಯಾದರು. ಪಿಲಿಪ್ಪೆ 33 (24 ಎಸೆತ) ದೇವದತ್ತ ಪಡಿಕ್ಕಲ್ 74 (45 ಎಸೆತ) ರನ್ ಬಾರಿಸಿದರು. ಉಳಿದಂತೆ ವಿಲಿಯರ್ಸ್ 15, ಗುರುಕೀರತ್ ಸಿಂಗ್ 14 ರನ್ ಗಳಿಸಿದರು.
ಮುಂಬೈ ಪರ ಬುಮ್ರಾ 3 ವಿಕೆಟ್ ಪಡೆದರು.
Next Story