varthabharthi


ಕರಾವಳಿ

ಬೆಳ್ತಂಗಡಿ: ಬಾಲಕಿಗೆ ಕಿರುಕುಳ ಪ್ರಕರಣ; ಆರೋಪಿ ಸೆರೆ

ವಾರ್ತಾ ಭಾರತಿ : 28 Oct, 2020

ಬೆಳ್ತಂಗಡಿ : 14ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಸಂಬಂಧ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಅಲೆಕ್ಕಿ ನಿವಾಸಿ ಜನಾರ್ದನ ಪೂಜಾರಿ (42) ಎಂದು ಗುರುತಿಸಲಾಗಿದೆ.

ಅ.22 ರಂದು ಬೆಳಗ್ಗೆ ಜನಾರ್ದನ ಪೂಜಾರಿ ಬಾಲಕಿಯನ್ನು ಮುಂಡಾಜೆ ಗ್ರಾಮದ ಪೇಟೆಯಿಂದ ಪುಸಲಾಯಿಸಿ ಬೈಕಿನಲ್ಲಿ‌ ಕುಳ್ಳಿರಿಸಿ ಕುವೆಟ್ಟು ಗ್ರಾಮದ ಮದ್ದಡ್ಕ ಎಂಬಲ್ಲಿಗೆ ಕರೆತಂದು ಆತನ ಗೆಳಯನ ಮನೆಯಲ್ಲಿ ಕಿರುಕುಳ ನೀಡಿರುವುದಾಗಿ ದೂರಲಾಗಿದೆ.

ಆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಎಸ್.ಐ ಪವನ್ ನಾಯ್ಕ್ ಅವರ ಮಾರ್ಗದರ್ಶನದಂತೆ ತನಿಖೆ‌ ಕೈಗೆತ್ತಿಕೊಂಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)