varthabharthi


ಕರಾವಳಿ

ಕಾಪು ಪುರಸಭೆ: ಅಧ್ಯಕ್ಷರಾಗಿ ಅನಿಲ್ ಕುಮಾರ್, ಉಪಾಧ್ಯಕ್ಷರಾಗಿ ಮಾಲಿನಿ

ವಾರ್ತಾ ಭಾರತಿ : 28 Oct, 2020

ಕಾಪು : ಕಾಪು ಪುರಸಭೆ ಎರಡನೇ ಅವಧಿಯ ಅಧ್ಯಕ್ಷರಾಗಿ ಬಿಜೆಪಿಯ ಅನಿಲ್ ಕುಮಾರ್, ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ಪಕ್ಷದ ಮಾಲಿನಿ  ಆಯ್ಕೆಯಾಗಿದ್ದಾರೆ.

ಕಾಪು ಪುರಸಭೆಯಲ್ಲಿ ಒಟ್ಟು 23 ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್ 12 ಬಿಜೆಪಿಯ 11 ಮಂದಿ ಸದಸ್ಯ ಬಲಹೊಂದಿದೆ. ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ.ಮೀಸಲಾಗಿದ್ದು,  ಬಿಜೆಪಿಯಿಂದ ಅನಿಲ್ ಕುಮಾರ್, ಕಾಂಗ್ರೆಸ್‍ನಿಂದ ಶಾಬು ಸಾಹೇಬ್ ಹಾಗು ಅಶ್ವಿನಿ ನಾಮ ಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಅಶ್ವಿನಿ ನಾಮ ಪತ್ರ ಹಿಂಪಡೆದಿದ್ದಾರೆ. ಅನಿಲ್ ಕುಮಾರ್ ಹಾಗು ಶಾಬು ಸಾಹೇಬ್ ಕಣದಲ್ಲಿದ್ದು, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಲಾಲಾಜಿ ಆರ್. ಮೆಂಡನ್ ಅವರ ಮತದ ಬಲದಿಂದ ಬಿಜೆಪಿ ಪಕ್ಷದ ಅನಿಲ್ ಕುಮಾರ್ 13 ಮತಗಳು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಕಾಂಗ್ರೆಸ್ ಪಕ್ಷದ ಶಾಬು 11 ಮತ ಪಡೆದಿದ್ದರು.

ಪರಿಶಿಷ್ಟ ಜಾತಿ ಮಹಿಳೆ ಮೀಸಲಟಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸೂಕ್ತ ಅಭ್ಯರ್ಥಿ ಇಲ್ಲದ ಕಾರಣ ಕಾಂಗ್ರೆಸ್ ಪಕ್ಷದ ಮಾಲಿನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಓರ್ವ ಗೈರು 

ಕಾಂಗ್ರೆಸ್‍ನ 12 ಸದಸ್ಯರಲ್ಲಿ ಸುರೇಶ್ ದೇವಾಡಿಗ ಚುನಾವಣೆಗೆ ಗೈರಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಮಂಗಳವಾರ ಸಂಜೆಯವರೆಗೆ ಪಕ್ಷದವರೊಂದಿಗೆ ಸಂಪರ್ಕದಲ್ಲಿದ್ದು, ಅವರು ಬುಧವಾರ ಏಕಾಏಕಿ ಯಾರಿಗೂ ಸಂಪರ್ಕಕ್ಕೆ ಸಿಗದೆ ಗೈರಾಗಿದ್ದರು. ಇದರಿಂದ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ. ಅಧ್ಯಕ್ಷ ಉಪಾಧ್ಯಕ್ಷರು ಆಯ್ಕೆಯಾದರೂ ಇನ್ನು ಕೇವಲ 7 ತಿಂಗಳಷ್ಟೇ ಅಧಿಕಾರ ಲಭ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)