varthabharthi


ಅಂತಾರಾಷ್ಟ್ರೀಯ

ಕೊರೋನಗೆ ಸಿಗುವ ಪ್ರಚಾರ ಕಂಡು ಟ್ರಂಪ್‌ಗೆ ಅಸೂಯೆ: ಒಬಾಮ

ವಾರ್ತಾ ಭಾರತಿ : 28 Oct, 2020

ಮಿಲಾವುಕೀ (ಅಮೆರಿಕ), ಅ. 28: ಕೋವಿಡ್-19ಕ್ಕೆ ಸಿಗುತ್ತಿರುವ ಮಾಧ್ಯಮ ಪ್ರಚಾರಕ್ಕೆ ಅವೆುರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸೂಯೆ ಪಡುತ್ತಿದ್ದಾರೆ ಎಂದು ದೇಶದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.

ಫ್ಲೋರಿಡ ರಾಜ್ಯದ ಒರ್ಲಾಂಡೊ ನಗರದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಟ್ರಂಪ್ ಶ್ವೇತಭವನವನ್ನು ‘ಬಿಸಿ ವಲಯ’ವಾಗಿ ಪರಿವರ್ತಿಸಿದ್ದಾರೆ ಎಂದರು.

ಡೆಮಾಕ್ರಟಿಕ್ ಪಕ್ಷದ ಅತ್ಯಂತ ಜನಪ್ರಿಯ ನಾಯಕನಾಗಿರುವ ಒಬಾಮ ಹಲವು ದಿನಗಳಿಂದ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಪರವಾಗಿ ಫ್ಲೋರಿಡದಲ್ಲಿ ಸರಣಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ.

 ‘‘ಕೊರೋನ ವೈರಸ್‌ಗೆ ಸಿಗುತ್ತಿರುವ ಪ್ರಚಾರ ಕಂಡು ಟ್ರಂಪ್ ಅಸೂಯೆ ಪಡುತ್ತಿದ್ದಾರೆ. ಅವರು ಆರಂಭದಿಂದಲೇ ಈ ಸಾಂಕ್ರಾಮಿಕದ ಮೇಲೆ ಗಮನ ಹರಿಸುತ್ತಿದ್ದರೆ, ದೇಶದಲ್ಲಿ ಸೋಂಕು ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ದಾಖಲೆಯ ಮಟ್ಟವನ್ನು ತಲುಪುತ್ತಿರಲಿಲ್ಲ’’ ಎಂದು ಅವರು ಅಭಿಪ್ರಾಯಪಟ್ಟರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)