varthabharthi


ಕ್ರೀಡೆ

ಆರ್‌ಸಿಬಿಯ ಗೆಲುವು ಕಸಿದ ಸೂರ್ಯಕುಮಾರ್ ಯಾದವ್

ಐಪಿಎಲ್ 2020: ಪ್ಲೇಆಫ್ ಗೆ ಲಗ್ಗೆ ಇಟ್ಟ ಹಾಲಿ ಚಾಂಪಿಯನ್ ಮುಂಬೈ

ವಾರ್ತಾ ಭಾರತಿ : 28 Oct, 2020

ಅಬುಧಾಬಿ: ಮಧ್ಯಮ ಕ್ರಮಾಂಕದ ಆಟಗಾರ ಸೂರ್ಯಕುಮಾರ್ ಯಾದವ್ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 5 ವಿಕೆಟ್ ಗಳ ಗೆಲುವು ಸಾಧಿಸಿದ್ದು, ಐಪಿಎಲ್2020 ಪ್ಲೇಆಫ್ ಗೆ ಲಗ್ಗೆ ಇಟ್ಟಿದೆ. ಜೊತೆಗೆ ಪಾಯಿಂಟ್ ಪಟ್ಟಿಯಲ್ಲೂ ಅಗ್ರಸ್ಥಾನಕ್ಕೆ ಏರಿದೆ.

ಗೆಲುವಿಗೆ 165 ರನ್ ಗಳ ಗುರಿ ಪಡೆದ ಮುಂಬೈ ಇಂಡಿಯನ್ಸ್ 19.1 ಓವರ್ ಗಳಲ್ಲಿ ಗೆಲುವಿನ ದಡ ತಲುಪಿತು. ಸೂರ್ಯಕುಮಾರ್ ಯಾದವ್ 79(43 ಎಸೆತ) ರನ್ ಬಾರಿಸಿದರು. ಇಶಾನ್ ಕಿಶಾನ್ 25 ರನ್ ಗಳಿಸಿದರು.

ಬೆಂಗಳೂರು ಪರ ಮುಹಮ್ಮದ್ ಸಿರಾಜ್ ಹಾಗೂ ಚಾಹಲ್ ತಲಾ 2 ವಿಕೆಟ್ ಪಡೆದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ 164/6 ರನ್ ಗಳಿಸಿತ್ತು. ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್ ಬಾರಿಸಿದ ಆಕರ್ಷಕ ಅರ್ಧಶತಕ ಬಾರಿಸಿದರು.

ಆರಂಭಿಕ ಆಟಗಾರರಾದ ಜೋಶ್ ಪಿಲಿಪ್ಪೆ ಹಾಗೂ ದೇವದತ್ತ ಪಡಿಕ್ಕಲ್ ಉತ್ತಮ ಆರಂಭ ಒದಗಿಸಿ ತಂಡಕ್ಕೆ ಆಸರೆಯಾದರು. ಪಿಲಿಪ್ಪೆ 33 (24 ಎಸೆತ) ದೇವದತ್ತ ಪಡಿಕ್ಕಲ್ 74 (45 ಎಸೆತ) ರನ್ ಬಾರಿಸಿದರು. ಉಳಿದಂತೆ ವಿಲಿಯರ್ಸ್ 15, ಗುರುಕೀರತ್ ಸಿಂಗ್ 14 ರನ್ ಗಳಿಸಿದರು.

ಮುಂಬೈ ಪರ ಬುಮ್ರಾ 3 ವಿಕೆಟ್ ಪಡೆದರು.

ಶರ್ಮಾ ಅನುಪಸ್ಥಿತಿಯಲ್ಲಿ ಕೀರನ್ ಪೊಲಾರ್ಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ಎದುರು ಮುಂಬೈ ಸೋತಿತ್ತು. ಕೊಹ್ಲಿ ಬಳಗವು ಕೂಡ ತನ್ನ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋಲನುಭವಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)