varthabharthi


ಕರ್ನಾಟಕ

ಕಾಗೆಯ ಗೂಡಲ್ಲಿ ಮೊಟ್ಟೆ ಇಡುವ ಕೋಗಿಲೆಯ ಬುದ್ಧಿ ಏಕೆ?: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕೆ

ವಾರ್ತಾ ಭಾರತಿ : 29 Oct, 2020

ಬೆಂಗಳೂರು, ಅ. 29: `ಸಿದ್ದರಾಮಯ್ಯನವರೇ, ದೇವೇಗೌಡರು ಬೆಳೆಸಿದ ಜೆಡಿಎಸ್‍ನಲ್ಲಿ ಸ್ಥಾನಮಾನ ಅನುಭವಿಸಿದಿರಿ, ಡಾ.ಜಿ.ಪರಮೇಶ್ವರ್ ಬೆಳೆಸಿದ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿಯಾದಿರಿ, ಡಿಕೆಶಿ ಕಟ್ಟುತ್ತಿರುವ ಪಕ್ಷದಲ್ಲಿ ಮತ್ತೆ ಸಿಎಂ ಕನಸು ಕಾಣುತ್ತಿದ್ದೀರಿ, ಕಾಗೆ ಕಟ್ಟಿದ ಗೂಡಲ್ಲಿ ಮೊಟ್ಟೆ ಇಡಲು ಹವಣಿಸುವ ಕೋಗಿಲೆಯ ಬುದ್ಧಿ ಏಕೆ?' ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, `ಸಿದ್ದರಾಮಯ್ಯ ಅವರೇ ನೀವು ಅಧಿಕಾರದಲ್ಲಿದ್ದಾಗ ಮಾಡಿದ್ದೇನು? ಕಾಂಗ್ರೆಸ್ ಸರಕಾರದ ಅನುದಾನ-2008ರಿಂದ 2014 3,393 ಕೋಟಿ ರೂ., ಮೋದಿ ಸರಕಾರದ ಅನುದಾನ-2014 ರಿಂದ 2020 10,611 ಕೋಟಿ ರೂ., ಉತ್ತರ ಕುಮಾರನ ಪೌರುಷ ತೋರುವ ಕಾಂಗ್ರೆಸ್ ಪಕ್ಷಕ್ಕೆ ಆಗ `ಧಮ್' ಇರಲಿಲ್ಲವೇ?' ಎಂದು ಖಾರವಾಗಿ ಪ್ರಶ್ನಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)