varthabharthi


ಕರ್ನಾಟಕ

ಭಜನಾ ಕಾರ್ಯಕ್ರಮದಲ್ಲಿ ಕುಣಿದ ಸಚಿವ ಪ್ರಭು ಚೌಹಾಣ್: ಕೊರೋನ ನಿಯಮ ಉಲ್ಲಂಘನೆ ಆರೋಪ

ವಾರ್ತಾ ಭಾರತಿ : 29 Oct, 2020

ಬೀದರ್, ಅ.29: ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಭವಾನಿ ಬಿಜಲಗಾಂವ್ ಗ್ರಾಮದ ಭವಾನಿ ಮಾತೆ ಮಂದಿರದಲ್ಲಿ ಆಯೋಜಿಸಿದ್ದ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಸ್ಕ್ ಹಾಕಿಕೊಳ್ಳದೇ ಭಜನೆ ಹಾಡಿನಲ್ಲಿ ಕುಣಿದಿದ್ದ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ಸಮಾರಂಭದಲ್ಲಿ ಭಜನಾ ಮಂಡಳಿಯ ಕೀರ್ತನಾಕಾರರು ಪಂಡರಿನಾಥನ ಭಜನೆ ಮಾಡುತ್ತಿದ್ದರು. ಇದನ್ನು ಕೇಳುತ್ತಲೇ ಮೈಮರೆತ ಸಚಿವರು ಭಜನೆಗೆ ಹೆಜ್ಜೆ ಹಾಕಿದರು. ಆದರೆ, ಕಾರ್ಯಕ್ರಮದಲ್ಲಿ ಯಾರೊಬ್ಬರೂ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದೆ, ಸುರಕ್ಷಿತ ಅಂತರ ಕಾಪಾಡಿಕೊಳ್ಳದೆ, ಕೊರೋನ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮಾಸ್ಕ್ ಹಾಕಿಕೊಳ್ಳಿ, ಸುರಕ್ಷಿತ ಅಂತರ ಕಾಪಾಡಿಕೊಳ್ಳಿ ಎಂದು ಸಚಿವರೇ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಆದರೆ, ಸಚಿವರೇ ಈ ರೀತಿಯಾಗಿ ನಿಯಮಗಳನ್ನು ಉಲ್ಲಂಘಿಸಿ ಕುಣಿದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)