varthabharthi


ಕರ್ನಾಟಕ

ಜಂಟಿ ಕಾರ್ಯದರ್ಶಿ ವೃಂದಕ್ಕೆ ವೇತನ ಹೆಚ್ಚಿಸಿ ಭಡ್ತಿ

ವಾರ್ತಾ ಭಾರತಿ : 29 Oct, 2020

ಬೆಂಗಳೂರು, ಅ. 29: ಸಚಿವಾಲಯದ ಆರು ಮಂದಿ ಉಪ ಕಾರ್ಯದರ್ಶಿ ವೃಂದದ ಕಳಕಂಡ ಅಧಿಕಾರಿಗಳಿಗೆ 90,500 ರೂ.ನಿಂದ 1,23,300 ರೂ.ವರೆಗೆ ವೇತನ ಶ್ರೇಣಿಗೆ ಹೆಚ್ಚಿಸಿ ಜಂಟಿ ಕಾರ್ಯದರ್ಶಿ ವೃಂದಕ್ಕೆ ಭಡ್ತಿ ನೀಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ನಿಯೋಜನೆಗೊಳ್ಳುವಂತೆ ಗುರುವಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಟಿ.ಮಹಂತೇಶ್ ಆದೇಶ ಹೊರಡಿಸಿದ್ದಾರೆ.

ಹಿದಾಯತುಲ್ಲಾ ಕೆ.ಎ.-ಸರಕಾರದ ಜಂಟಿ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ(ಬಿಬಿಎಂಪಿ), ಇಂದ್ರೇಶ್ ಆರ್.-ಜಂಟಿ ಕಾರ್ಯದರ್ಶಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಶಂಕರಗೌಡ ಸಿ.ದೊಡ್ಡಮನಿ-ಸರಕಾರದ ಜಂಟಿ ಕಾರ್ಯದರ್ಶಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ(ಆಡಳಿತ), ಅನಂದ ಎನ್.ಕಾಸ್ಕರ್-ಸರಕಾರದ ಜಂಟಿ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಸಿಬ್ಬಂದಿ), ವೈ.ಎಸ್.ದಳವಾಯಿ-ಸರಕಾರದ ಜಂಟಿ ಕಾರ್ಯದರ್ಶಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಬಿ.ಪಿ.ಚನ್ನಬಸವೇಶ-ಸರಕಾರದ ಜಂಟಿ ಕಾರ್ಯದರ್ಶಿ ನಿಯೋಜನೆ ಮೇರೆಗೆ ವಿಶೇಷ ಕರ್ತವ್ಯಾಧಿಕಾರಿ ಸಿಎಂ ಸಚಿವಾಲಯ ಇಲ್ಲಿಗೆ ನಿಯೋಜನೆ ಮಾಡಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)