varthabharthi


ಕರ್ನಾಟಕ

ಡಿಜಿಟಲ್ ಪಾವತಿ ಮೂಲಕ ರಸಗೊಬ್ಬರ ಮಾರಾಟ

ವಾರ್ತಾ ಭಾರತಿ : 29 Oct, 2020

ಬೆಂಗಳೂರು, ಅ. 29: `ಕೇಂದ್ರ ಸರಕಾರದಿಂದ ರಸಗೊಬ್ಬರದಲ್ಲಿ ನೇರ ನೆರವು ವರ್ಗಾವಣೆ ಯೋಜನೆಯಡಿ ಎಲ್ಲ ರಸಗೊಬ್ಬರ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ರೈತರಿಗೆ ರಸಗೊಬ್ಬರವನ್ನು ಮಾರಾಟ ಮಾಡಲು ನಗದು ರಹಿತ/ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಉತ್ತೇಜಿಸಲಾಗುತ್ತಿದೆ. ರಸಗೊಬ್ಬರ ಚಿಲ್ಲರೆ ಮಾರಾಟಗಾರರು ತಮ್ಮ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ರಸಗೊಬ್ಬರಗಳ ಮಾರಾಟಕ್ಕಾಗಿ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುವ ವ್ಯವಸ್ಥೆಯನ್ನು ಮಾಡಲು ನಿರ್ದೇಶಿಸಲಾಗಿದೆ.

ಆದುದರಿಂದ ಎಲ್ಲ ಚಿಲ್ಲರೆ ಮಾರಾಟಗಾರರು ತಮ್ಮ ಮಳಿಗೆಗಳಲ್ಲಿ ತಪ್ಪದೇ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಕೈಗೊಂಡು ಸಹಕರಿಸಲು ಪ್ರಕಟಣೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)