varthabharthi


ಅಂತಾರಾಷ್ಟ್ರೀಯ

ಹತ್ಯೆ: ಫಿಲಡೆಲ್ಫಿಯ ನಗರದಲ್ಲಿ ಕರ್ಫ್ಯೂ

ವಾರ್ತಾ ಭಾರತಿ : 29 Oct, 2020

ನ್ಯೂಯಾರ್ಕ್, ಅ. 29: ಪೊಲೀಸರು ಹಾರಿಸಿದ ಗುಂಡಿಗೆ ಕರಿಯ ವ್ಯಕ್ತಿಯೋರ್ವರು ಬಲಿಯಾದ ಹಿನ್ನೆಲೆಯಲ್ಲಿ, ಎರಡು ರಾತ್ರಿ ಹಿಂಸಾಚಾರ ನಡೆದ ಬಳಿಕ ಫಿಲಡೆಲ್ಫಿಯ ನಗರದಲ್ಲಿ ಬುಧವಾರ ಕರ್ಫ್ಯೂ ವಿಧಿಸಲಾಗಿದೆ.

ಕೈಯಲ್ಲಿ ಚೂರಿ ಹಿಡಿದಿದ್ದ 27 ವರ್ಷದ ವಾಲ್ಟರ್ ವಾಲೇಸ್‌ರನ್ನು ಪೊಲೀಸರು ಸೋಮವಾರ ಗುಂಡು ಹಾರಿಸಿ ಕೊಂದಿದ್ದರು. ಈ ಹತ್ಯೆಯನ್ನು ಪ್ರತಿಭಟಿಸಿ ಸಾವಿರಾರು ಜನರು ಫಿಲಡೆಲ್ಫಿಯ ನಗರದ ಬೀದಿಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದಾರೆ. ಅಂಗಡಿಗಳನ್ನು ಲೂಟಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಯುವಕನು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದನು, ಪೊಲೀಸರು ಯಾಕೆ ಟೇಸರ್ ಗನ್ ಬಳಸಿ ಆತನನ್ನು ಕೆಳಗುರುಳಿಸಲಿಲ್ಲ, ಯಾಕೆ ನೇರವಾಗಿ ಗುಂಡು ಹಾರಿಸಿದರು ಎಂದು ಮನೆಯವರು ಪ್ರಶ್ನಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)