varthabharthi


ಅಂತಾರಾಷ್ಟ್ರೀಯ

ಗ್ರೀಸ್, ಟರ್ಕಿಯಲ್ಲಿ ಭಾರೀ ಭೂಕಂಪ, ಹಲವಾರು ಕಟ್ಟಡಗಳಿಗೆ ಹಾನಿ

ವಾರ್ತಾ ಭಾರತಿ : 30 Oct, 2020

ಸಾಂದರ್ಭಿಕ ಚಿತ್ರ

ಅಥೆನ್ಸ್ (ಗ್ರೀಸ್), ಅ. 30: ಗ್ರೀಸ್ ಮತ್ತು ಟರ್ಕಿಯಲ್ಲಿ ಶುಕ್ರವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಹಲವು ಕಟ್ಟಡಗಳು ಕುಸಿದಿವೆ. ಭೂಕಂಪದಿಂದಾಗಿ ಸಮುದ್ರ ಉಕ್ಕೇರಿದ್ದು, ಟರ್ಕಿಯ ರಿಸಾರ್ಟ್ ನಗರ ಇಝ್ಮಿರ್‌ನ ರಸ್ತೆಗಳು ಜಲಾವೃತವಾಗಿವೆ.

ಗ್ರೀಸ್‌ನ ಸಮೋಸ್ ದ್ವೀಪಕ್ಕೂ ಸಣ್ಣ ಪ್ರಮಾಣದ ಸುನಾಮಿ ಅಪ್ಪಳಿಸಿದೆ ಹಾಗೂ ಕಟ್ಟಡಗಳು ನಾಶಗೊಂಡಿವೆ ಎಂದು ಆ ದೇಶದ ಸರಕಾರಿ ಟಿವಿ ವರದಿ ಮಾಡಿದೆ.

ರಿಕ್ಟರ್ ಮಾಪಕದಲ್ಲಿ 7ರ ತೀವ್ರತೆ ಹೊಂದಿದ್ದ ಭೂಕಂಪದ ಕೇಂದ್ರ ಬಿಂದು ಸಮೋಸ್ ದ್ವೀಪದಲ್ಲಿರುವ ಕರ್ಲೊವಸಿ ಪಟ್ಟಣದಿಂದ 14 ಕಿ.ಮೀ. ದೂರದಲ್ಲಿ ಏಜಿಯನ್ ಸಮುದ್ರದಲ್ಲಿತ್ತು ಎಂದು ಯುಎಸ್ ಜಿಯಾಲಜಿಕಲ್ ಸರ್ವೇ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)