varthabharthi


ಅಂತಾರಾಷ್ಟ್ರೀಯ

ಕರ್ನಾಟಕ ಮೂಲದ ವ್ಯಕ್ತಿ ಬೈಡನ್‌ರ ಪ್ರಮುಖ ಪ್ರಚಾರ ತಂತ್ರಗಾರ

ವಾರ್ತಾ ಭಾರತಿ : 30 Oct, 2020

 ಫೋಟೊ ಕೃಪೆ: twitter.com/vivek_murthy

ವಾಶಿಂಗ್ಟನ್, ಅ. 30: ಕರ್ನಾಟಕದ ಡಾ. ವಿವೇಕ್ ಎಚ್. ಮೂರ್ತಿ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜೋ ಬೈಡನ್‌ರ ಚುನಾವಣಾ ಪ್ರಚಾರ ಅಭಿಯಾನದ ಪ್ರಮುಖ ತಂತ್ರಗಾರರ ಪೈಕಿ ಓರ್ವರಾಗಿದ್ದಾರೆ.

ನಿಕಟಪೂರ್ವ ಅಧ್ಯಕ್ಷ ಬರಾಕ್ ಒಬಾಮ ಆಡಳಿತದಲ್ಲಿ 2014ರಲ್ಲಿ ಅತ್ಯಂತ ಕಿರಿಯ ಸರ್ಜನ್ ಜನರಲ್ ಆಗಿದ್ದ ಅವರು, ಚುನಾವಣೆಯಲ್ಲಿ ಬೈಡನ್ ಗೆದ್ದರೆ ಮುಂದಿನ ಸರಕಾರದಲ್ಲಿ ಪ್ರಮುಖ ಹುದ್ದೆಯೊಂದನ್ನು ಪಡೆಯುವುದು ನಿಶ್ಚಿತವಾಗಿದೆ.

43 ವರ್ಷದ ಡಾ. ಮೂರ್ತಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹಳ್ಳಿಗೆರೆ ಗ್ರಾಮದವರು. ಅವರು ಹಿಂದುಳಿದ ವರ್ಗದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸರ ನಿಕಟ ಸಹವರ್ತಿಯಾಗಿದ್ದ ಎಚ್.ಟಿ. ನಾರಾಯಣ ಶೆಟ್ಟಿಯ ಮೊಮ್ಮಗನಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)