varthabharthi


ಬೆಂಗಳೂರು

ಯುವತಿಗೆ ಲಕ್ಷಾಂತರ ರೂ. ನಗದು ವಂಚಿಸಿದ ಯುವಕ: ದೂರು ದಾಖಲು

ವಾರ್ತಾ ಭಾರತಿ : 30 Oct, 2020

ಬೆಂಗಳೂರು, ಅ.30: ಮಾಟ್ರಿಮೋನಿಯಲ್ಲಿ ಪರಿಚಯವಾದ ಯುವಕನೊಬ್ಬ ಯುವತಿಗೆ 3.07 ಲಕ್ಷ ರೂ.ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟೆಕ್ಕಿ ಯುವತಿಗೆ ಕಬೀರ್ ಆನಂದ್ ಎಂಬ ಹೆಸರಿನ ವ್ಯಕ್ತಿ ಪರಿಚಯವಾಗಿ ನಂತರ ಪರಸ್ಪರ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದಾರೆ. ನಂತರ ಇಬ್ಬರು ಆಪ್ತರಾಗಿದ್ದಾರೆ.

ತದನಂತರ, ನಾನು ಲಂಡನ್‍ನಿಂದ ಅಕ್ಟೋಬರ್ 18ರಂದು ಭಾರತಕ್ಕೆ ಬರುತ್ತೇನೆ ಎಂದು ಯುವತಿಗೆ ನಂಬಿಸಿದ್ದಾನೆ, ಬಳಿಕ ಅದೇ ದಿನ ಕಸ್ಟಂ ಅಧಿಕಾರಿಯ ಸೋಗಿನಲ್ಲಿ ಅಪರಿಚಿತ ಮಹಿಳೆ ಕರೆ ಮಾಡಿ ಕಬೀರ್ ಆನಂದ್ ಲಂಡನ್‍ನಿಂದ ಹೊಸದಿಲ್ಲಿಗೆ ಬಂದಿದ್ದಾರೆ. ಅಲ್ಲಿಂದ 1.70 ಲಕ್ಷ ಯುರೋ ಕರೆನ್ಸಿ ತಂದಿದ್ದಾರೆ. ಇದನ್ನು ರೂ. ಆಗಿ ಪರಿವರ್ತಿಸಲು ಹಣ ವರ್ಗಾವಣೆ ಮಾಡಿ ಎಂದು ಯುವತಿಯಿಂದ 3.07 ಲಕ್ಷ ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.

ನಂತರ ಅಪರಿಚಿತ ಮಹಿಳೆ ಹಾಗೂ ಕಬೀರ್ ಆನಂದ್ ಮೊಬೈಲ್ ಸಂಪರ್ಕ ಕಡಿತಗೊಳಿಸಿದ್ದಾರೆ. ಈ ಸಂಬಂಧ ಯುವತಿ ವೈಟ್ ಫೀಲ್ಡ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆಕೈಗೊಂಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)