varthabharthi


ಕರ್ನಾಟಕ

8 ಮಂದಿ ಸಾಧಕರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜಯಚಾಮರಾಜ ಒಡೆಯರ್ ಪ್ರಶಸ್ತಿ ಪ್ರದಾನ

ವಾರ್ತಾ ಭಾರತಿ : 30 Oct, 2020

ಮೈಸೂರು,ಅ.30: ಮೈಸೂರು ಕನ್ನಡ ವೇದಿಕೆ ವತಿಯಿಂದ ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಮೈಸೂರು ಸಂಸ್ಥಾಪಕರ ಸ್ಮರಣೆ ಕಾರ್ಯಕ್ರಮವನ್ನುಆಯೋಜಿಸಲಾಗಿತ್ತು.

ದೂರದರ್ಶನ, ಚಂದನ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕರು ನಾಡೋಜ ಡಾ.ಮಹೇಶ್ ಜೋಶಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 8 ಮಂದಿ ಸಾಧಕರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜಯಚಾಮರಾಜ ಒಡೆಯರ್ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಆಯುರ್ ಮಟಂ ಸಂಸ್ಥಾಪಕ ಡಾ.ಮನು ಬಿ.ಮೆನನ್, ಕ್ರೀಡಾ ತರಬೇತುದಾರ ಶ್ರೀಶಾಭಟ್, ಹಿರಿಯ ಪತ್ರಕರ್ತ ಕಮಲ್ ಗೋಪಿನಾಥ್, ರೋಟರಿ ಸಂಘದ ಅಧ್ಯಕ್ಷ (ದ.ಪೂ) ರಾಜೀವ್, ಬಿಟಿವಿ ನ್ಯೂಸ್ ವರದಿಗಾರ ಬಿ.ರಾಘವೇಂದ್ರ, ಸಮಾಜ ಸೇವಕ ಎಚ್.ದಾಸ್, ಶಿವಂ ಅಕಾಡೆಮಿಯ ಡಿ.ಆಯುಷ್ಮಾನ್, ಚಿರಬಾಂಧವ್ಯ ಟ್ರಸ್ಟ್ ನ ಕೆ.ಆರ್.ರವಿಕುಮಾರ್ ಅವರಿಗೆ ಪ್ರಶಸ್ತಿ ನೀಡಲಾಯಿತು.

ಈ ವೇಳೆ ಉಪಮಹಾಪೌರರಾದ ಪಿ.ಶ್ರೀಧರ್, ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸು, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಹೋರಾಟಗಾರ ನಾಲಾಬೀದಿ ರವಿ ಉಪಸ್ಥಿತರಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)