varthabharthi


ಕ್ರೀಡೆ

ಶಿಸ್ತುಬದ್ಧ ಬೌಲಿಂಗ್ ದಾಳಿ: ಆರ್‌ಸಿಬಿ ವಿರುದ್ಧ ಹೈದರಾಬಾದ್ ಗೆಲುವಿಗೆ 121 ರನ್ ಗುರಿ

ವಾರ್ತಾ ಭಾರತಿ : 31 Oct, 2020

ಶಾರ್ಜಾ: ಐಪಿಎಲ್ 2020 ಆವೃತ್ತಿಯ 51ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕನಿಷ್ಠ ಮೊತ್ತವನ್ನು ದಾಖಲಿಸಿದ್ದು, ಹೈದರಾಬಾದ್ ಗೆ 121 ರನ್ ಗುರಿ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ 120 ರನ್ ಗಳಿಸಿತು. ಆರಂಭಿಕ ಆಟಗಾರ ಜೋಶ್ ಫಿಲಿಪ್ಪೆ 32 (31 ಎಸೆತ) ಎಬಿಡಿ ವಿಲಿಯರ್ಸ್ 24, ವಾಶಿಂಗ್ಟನ್ ಸುಂದರ್ 21 ರನ್ ಬಾರಿಸಿದರು.

ಹೈದರಾಬಾದ್ ಪರ ಸಂದೀಪ್ ಶರ್ಮಾ ಹಾಗೂ ಹೋಲ್ಡರ್ ತಲಾ 2, ನಟರಾಜನ್, ನದೀಮ್ ಹಾಗೂ ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು.

ಸತತ ಎರಡು ಸೋಲುಗಳಿಂದ ಬೇಸತ್ತಿರುವ ಕೊಹ್ಲಿ ಬಳಗಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. 7 ಪಂದ್ಯಗಳಲ್ಲಿ ಗೆದ್ದು ಐದರಲ್ಲಿ ಸೋತಿರುವ ಆರ್‌ಸಿಬಿ ಪ್ಲೇಆಫ್ ತಲುಪಲು ಎದುರು ನೋಡುತ್ತಿದೆ. ಹೈದರಾಬಾದ್ ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, 12 ಪಂದ್ಯಗಲ್ಲಿ 5ರಲ್ಲಿ ಗೆದ್ದು 7 ಪಂದ್ಯಗಳನ್ನು ಸೋತು 7ನೇ ಸ್ಥಾನದಲ್ಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)