ಬಹರೈನ್ ನ ದೀರ್ಘಾವಧಿ ಪ್ರಧಾನಿ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ನಿಧನ
ಬಹರೈನ್: ಬಹರೈನ್ ನ ದೀರ್ಘಾವಧಿ ಪ್ರಧಾನಿಯಾಗಿದ್ದ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ನಿಧನರಾಗಿದ್ದಾರೆ ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಅಮೆರಿಕದ ಮಯೊ ಕ್ಲಿನಿಕ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ನಿಧನರಾದರು ಎಂದು ಬಹರೈನ್ ಸುದ್ದಿಸಂಸ್ಥೆ ಬುಧವಾರ ತಿಳಿಸಿದೆ.
1935ರ ನವೆಂಬರ್ 24 ರಂದು ಜನಿಸಿರುವ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ 1971ರಿಂದ ಬಹರೈನ್ ನ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Next Story