varthabharthi


ಗಲ್ಫ್ ಸುದ್ದಿ

ಯುವರಾಜ ಹಾಮದ್ ಅಲ್-ಖಲೀಫ ಬಹರೈನ್‌ನ ನೂತನ ಪ್ರಧಾನಿ

ವಾರ್ತಾ ಭಾರತಿ : 12 Nov, 2020

ಮನಾಮ (ಬಹರೈನ್), ನ. 12: ಬಹರೈನ್‌ನ ಯುವರಾಜ ಶೇಖ್ ಸಲ್ಮಾನ್ ಬಿನ್ ಹಾಮದ್ ಅಲ್-ಖಲೀಫರನ್ನು ದೇಶದ ನೂತನ ಪ್ರಧಾನಿಯಾಗಿ ಬುಧವಾರ ನೇಮಿಸಲಾಗಿದೆ. 1971ರಿಂದಲೂ ದೇಶದ ಪ್ರಧಾನಿಯಾಗಿದ್ದ, ಅವರ ಅಜ್ಜ ರಾಜಕುಮಾರ ಖಲೀಫ ಬಿನ್ ಸಲ್ಮಾನ್ ಅಲ್-ಖಲೀಫರ ನಿಧನದ ಬಳಿಕ ನೂತನ ಪ್ರಧಾನಿಯ ನೇಮಕ ನಡೆದಿದೆ.

ಖಲೀಫ ಬಿನ್ ಸಲ್ಮಾನ್ ಅಲ್-ಖಲೀಫ ಜಗತ್ತಿನ ಅತ್ಯಂತ ಸುದೀರ್ಘಾವಧಿ ಸೇವೆ ಸಲ್ಲಿಸಿರುವ ಪ್ರಧಾನಿಯಾಗಿದ್ದಾರೆ. ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 84 ವರ್ಷದ ದಿವಂಗತ ಪ್ರಧಾನಿ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ನಿಧನರಾಗಿದ್ದಾರೆ.

ಅಮೆರಿಕ ಮತ್ತು ಬ್ರಿಟನ್‌ಗಳಲ್ಲಿ ಶಿಕ್ಷಣ ಪಡೆದಿರುವ ನೂತನ ಪ್ರಧಾನಿ ಶೇಖ್ ಸಲ್ಮಾನ್ ಬಿನ್ ಹಾಮದ್ ಅಲ್-ಖಲೀಫ ಪ್ರಥಮ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ ಹಾಗೂ ಅವರು ಬಹರೈನ್ ರಕ್ಷಣಾ ಪಡೆಯ ಉಪ ಮುಖ್ಯ ಸೇನಾಪತಿಯಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)