ಬಿಹಾರದ ಸಿಎಂ ಆಗಿ ಮುಂದುವರಿಯಲಿರುವ ನಿತೀಶ್ ಕುಮಾರ್: ಎನ್ ಡಿಎ ಘೋಷಣೆ
ಹೊಸದಿಲ್ಲಿ: ನಿತೀಶ್ ಕುಮಾರ್ ಅವರು ನಾಲ್ಕನೆ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಶಾಸಕಾಂಗ ಪಕ್ಷದ ಸಭೆಯ ನಂತರ ಎನ್ ಡಿಎ ಘೋಷಿಸಿದೆ.
ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಸರಳ ಬಹುಮತ ಗೆದ್ದಿದೆ. ಆದರೆ ನಿತೀಶ್ ಕುಮಾರ್ ಅವರ ಆರ್ ಜೆಡಿ 71 ಸ್ಥಾನಗಳಿಂದ 43 ಸ್ಥಾನಗಳಿಗೆ ಕುಸಿದಿತ್ತು. ಇದರಿಂದಾಗಿ ನಿತೀಶ್ ಕುಮಾರ್ ಅವರನ್ನು ಸಿಎಂ ಆಗಿ ಮುಂದುವರಿಸುವ ಕುರಿತು ಅಸಮಾಧಾನ ವ್ಯಕ್ತವಾಗಬಹುದು ಎನ್ನುವ ವದಂತಿಯಿತ್ತು. ಆದರೆ ಶಾಸಕಾಂಗ ಪಕ್ಷದ ಸಭೆಯ ನಂತರ ಎನ್ ಡಿಎ ನಿತೀಶ್ ಕುಮಾರ್ ಅವರನ್ನು 4ನೆ ಬಾರಿಗೆ ಸಿಎಂ ಆಗಿ ಮುಂದುವರಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ.
Next Story