ಪ್ರಸಿದ್ಧ ಬಂಗಾಳಿ ನಟ ಸೌಮಿತ್ರ ಚಟರ್ಜಿ ನಿಧನ
ಹೊಸದಿಲ್ಲಿ: ಪ್ರಸಿದ್ಧ ಬಂಗಾಳಿ ನಟ ಸೌಮಿತ್ರ ಚಟರ್ಜಿ (85) ರವಿವಾರ ನಿಧನರಾಗಿದ್ದಾರೆ. ಕಳೆದ ತಿಂಗಳು ಅವರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಸತ್ಯಜಿತ್ ರೇ ಅವರ ಸಿನೆಮಾಗಳ ಮೂಲಕ ಪ್ರಸಿದ್ಧರಾದ ಸೌಮಿತ್ರ ಚಟರ್ಜಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮ ಭೂಷಣ ಮತ್ತು ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ್ದಾರೆ.
Next Story