varthabharthi


ಅಂತಾರಾಷ್ಟ್ರೀಯ

ಭಾರತ ಮೂಲದ ಮಾಲಾ ಅಡಿಗ ಜಿಲ್ ಬೈಡನ್ ಅವರ ನೀತಿ ನಿರ್ದೇಶಕಿಯಾಗಿ ನೇಮಕ

ವಾರ್ತಾ ಭಾರತಿ : 21 Nov, 2020

 ವಾಷಿಂಗ್ಟನ್:ಅಮೆರಿಕದ ಅಧ್ಯಕ್ಷರಾಗಿ ನಿಯೋಜಿತರಾಗಿರುವ ಜೋ ಬೈಡನ್ ಅವರು ಭಾರತೀಯ-ಅಮೆರಿಕನ್ ಮಾಲಾ ಅಡಿಗ ಅವರನ್ನು ತಮ್ಮ ಪತ್ನಿ ಜಿಲ್ ಬೈಡನ್ ಅವರ ನೀತಿ ನಿರ್ದೇಶಕಿಯನ್ನಾಗಿ ಶುಕ್ರವಾರ ನೇಮಕ ಮಾಡಿದ್ದಾರೆ.

 ಮಾಲಾ ಅಡಿಗ ಅವರು ಜಿಲ್ ಬೈಡನ್ ಅವರ ಹಿರಿಯ ಸಲಹೆಗಾರರಾಗಿ ಹಾಗೂ ಬೈಡನ್-ಕಮಲಾ ಹ್ಯಾರಿಸ್ ಪ್ರಚಾರ ಅಭಿಯಾನದ ಹಿರಿಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.ಈ ಹಿಂದೆ ಮಾಲಾ ಅವರು ಬೈಡನ್ ಫೌಂಡೇಶನ್‌ನಲ್ಲಿ  ಉನ್ನತ ಶಿಕ್ಷಣ ಹಾಗೂ ಮಿಲಿಟರಿ ಕುಟುಂಬಗಳಿಗೆ ನಿರ್ದೇಶಕಿಯಾಗಿದ್ದರು.

 ಮಾಜಿ ಅಧ್ಯಕ್ಷ ಬರಾಕ್ ಒಬಾಮರ ಆಡಳಿತದ ಸಮಯದಲ್ಲಿ ಮಾಲಾ ಅಡಿಗ ಅವರು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವ್ಯವಹಾರಗಳ ಬ್ಯೂರೋದಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳ ರಾಜ್ಯ ಉಪ ಸಹಾಯಕ ಕಾರ್ಯದರ್ಶಿಯಾಗಿ, ಜಾಗತಿಕ ಮಹಿಳಾ ಸಮಸ್ಯೆಗಳ ರಾಜ್ಯ ಕಚೇರಿಯ ಸೆಕ್ರೆಟರಿಯಲ್ಲಿ ಸಿಬ್ಬಂದಿ ಮುಖ್ಯಸ್ಥರಾಗಿ ಹಾಗೂ ರಾಯಭಾರಿಯ ಹಿರಿಯ ಸಲಹೆಗಾರಾಗಿಯೂ ಸೇವೆ ಸಲ್ಲಿಸಿದ್ದರು.

ಇಲಿನಾಯ್ಸೆ ಮೂಲದ ಮಾಲಾ ಅಡಿಗ ಗ್ರಿನ್ನೆಲ್ ಕಾಲೇಜು, ಮಿನ್ನೆಸೋಟ ವಿಶ್ವ ವಿದ್ಯಾಲಯದ ಸಾರ್ವಜನಿಕ ಆರೋಗ್ಯ ಶಾಲೆ ಹಾಗೂ ಚಿಕಾಗೊ ವಿವಿಯ ಕಾನೂನು ಶಾಲೆಯ ಪದವೀಧರೆಯಾಗಿದ್ದಾರೆ. 2008ರಲ್ಲಿ ಮಾಜಿ ಅಧ್ಯಕ್ಷ ಒಬಾಮರ ಪ್ರಚಾರ ಅಭಿಯಾನದಲ್ಲಿ ಸೇರುವ ಮೊದಲು ಚಿಕಾಗೊ ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)