varthabharthi


ರಾಷ್ಟ್ರೀಯ

ಪ್ರಧಾನಿಯ ದಿಟ್ಟ ಸುಧಾರಣೆ ಭಾರತದ ತ್ವರಿತ ಆರ್ಥಿಕ ಪ್ರಗತಿಗೆ ದಾರಿ ಮಾಡಿಕೊಡಲಿದೆ: ಮುಖೇಶ್ ಅಂಬಾನಿ

ವಾರ್ತಾ ಭಾರತಿ : 21 Nov, 2020

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಜಾರಿಗೆ ತರಲಾಗಿರುವ ದಿಟ್ಟ ಸುಧಾರಣೆಗಳು ಮುಂಬರುವ ವರ್ಷಗಳಲ್ಲಿ ಭಾರತದ ತ್ವರಿತ ಆರ್ಥಿಕ ಪ್ರಗತಿಗೆ ದಾರಿ ಮಾಡಿಕೊಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಶನಿವಾರ ಹೇಳಿದ್ದಾರೆ.

ಪಂಡಿತ್ ದೀನ್ ದಯಾಳ್ ಪೆಟ್ರೋಲಿಯಂ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, "ಅವರ

( ಪ್ರಧಾನಿ ಮೋದಿ)ಆಕರ್ಷಕ ಹಾಗೂ ಕ್ರಿಯಾತ್ಮಕ ನಾಯಕತ್ವವು ವಿಶ್ವದ ಗಮನ ಸೆಳೆದಿದೆ. ಅವರ ವಿಶ್ವಾಸ ಹಾಗೂ ದೃಢ ನಿಶ್ಚಯವು ಪ್ರೇರಣೆ ನೀಡಿದೆ. ಅವರ ನಾಯಕತ್ವದಲ್ಲಿ ಪರಿಚಯಿಸಲಾದ ದಿಟ್ಟ ಸುಧಾರಣೆಗಳು ಮುಂದಿನ ವರ್ಷಗಳಲ್ಲಿ ಭಾರತದ ತ್ವರಿತ ಚೇತರಿಕೆ ಹಾಗೂ ಕ್ಷಿಪ್ರ ಆರ್ಥಿಕ ಪ್ರಗತಿಗೆ ದಾರಿ ಮಾಡಿಕೊಡುತ್ತದೆ ಎಂದು ನನಗೆ ಖಾತ್ರಿ ಇದೆ'' ಎಂದು ಅಂಬಾನಿ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)