varthabharthi


ಅಂತಾರಾಷ್ಟ್ರೀಯ

ಅಮೆರಿಕ: ಶೂಟೌಟ್‌ನಲ್ಲಿ 8 ಮಂದಿಗೆ ಗಾಯ

ವಾರ್ತಾ ಭಾರತಿ : 21 Nov, 2020

ವಾಶಿಂಗ್ಟನ್,ನ.21: ಅಮೆರಿಕದ ವಿಸ್ಕನ್‌ಸಿನ್‌ ರಾಜ್ಯದ  ಶಾಪಿಂಗ್ ಮಾಲ್ ಒಂದರಲ್ಲಿ ಶುಕ್ರವಾರ ನಡೆದ ಶೂಟೌಟ್‌ನಲ್ಲಿ ಕನಿಷ್ಠ ಎಂಟು ಮಂದಿ ಗಾಯಗೊಂಡಿದ್ದಾರೆ. ಆದರೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಯು ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಪೊಲೀಸರು ಭಾರೀ ಜಾಲ ಬೀಸಿದ್ದಾರೆ.

ವ್ಯಾಯುವಟೋಸಾ ನಗರದ ಮೇಫೇರ್ ಮಾಲ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು, ಏಳು ಮಂದಿ ವಯಸ್ಕರು ಹಾಗೂ ಓರ್ವ ಹದಿಹರೆಯದ ತರುಣ ಗಾಯಗೊಂಡಿದ್ದಾರೆ.

ಶೂಟೌಟ್ ನಡೆಸಿದ ವ್ಯಕ್ತಿಯು 20ರಿಂದ 30 ವರ್ಷದೊಳಗಿನ ಬಿಳಿಯ ಜನಾಂಗೀಯನೆಂದು ಗುರುತಿಸಲಾಗಿದೆ. ದುಷ್ಕರ್ಮಿಯು ಮನಬಂದಂತೆ ಗುಂಡಿನ ದಾಳಿ ನಡೆಸಿದ ಸಂದರ್ಭದಲ್ಲಿ ಹಲವಾರು ಮಂದಿ ಉದ್ಯೋಗಿಗಳು ಕಟ್ಟಡದ ಒಳಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)