varthabharthi


ಸಿನಿಮಾ

ಅತ್ಯುತ್ತಮ ಡ್ರಾಮಾ ಸೀರೀಸ್ 'ಎಮ್ಮಿ ಅವಾರ್ಡ್' ಪಡೆದ 'ಡೆಲ್ಲಿ ಕ್ರೈಂ'

ವಾರ್ತಾ ಭಾರತಿ : 24 Nov, 2020

ಹೊಸದಿಲ್ಲಿ : ನೆಟ್‍ಫ್ಲಿಕ್ಸ್ ಇಂಡಿಯಾದ ಒರಿಜಿನಲ್ ವೆಬ್ ಶೋ 'ಡೆಲ್ಲಿ ಕ್ರೈಂ' 48ನೇ ಅಂತಾರಾಷ್ಟ್ರೀಯ ಎಮ್ಮಿ ಅವಾಡ್ರ್ಸ್ ಸಮಾರಂಭದಲ್ಲಿ ಅತ್ಯುತ್ತಮ ನಾಟಕ ಸರಣಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. 2012ರಲ್ಲಿ ದೇಶವನ್ನೇ ನಡುಗಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನಾಧರಿಸಿ ಈ ವೆಬ್ ಸರಣಿ ತಯಾರಿಸಲಾಗಿತ್ತು,

ವರ್ಚುವಲ್ ಸಮಾರಂಭದಲ್ಲಿ  ಭಾಗವಹಿಸಿದ್ದ ನಿರ್ದೇಶಕ ರಿಚ್ಚೀ ಮೆಹ್ತಾ ಈ ಪ್ರಶಸ್ತಿಯನ್ನು ಎಲ್ಲಾ ಮಹಿಳೆಯರಿಗೆ ಮುಡಿಪಾಗಿಸಿದ್ದಾರೆ. ಈ ವೆಬ್ ಶೋ ದಲ್ಲಿ ಶೆಫಾಲಿ ಶಾ, ರಸಿಕಾ ದುಗಲ್, ಆದಿಲ್ ಹುಸೈನ್ ಹಾಗೂ ರಾಜೇಶ್ ತೈಲಂಗ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)