varthabharthi


ಗಲ್ಫ್ ಸುದ್ದಿ

ಹೊಸ ಶಿಕ್ಷಣ ನೀತಿಯನ್ನು ಸಾರಾಸಗಟಾಗಿ ತಿರಸ್ಕರಿಸಿ : ಶಿವಸುಂದರ್

ವಾರ್ತಾ ಭಾರತಿ : 24 Nov, 2020

ದಮ್ಮಾಮ್ : "ಭಾರತ ಸರಕಾರ ತರಾತುರಿಯಲ್ಲಿ ಅನುಮೋದಿಸಿರುವ ಹೊಸ ಶಿಕ್ಷಣ ನೀತಿಯು ಬ್ರಾಹ್ಮಣ್ಯ ಹಾಗೂ ಕಾರ್ಪೊರೇಟ್ ವಲಯದ ಹಿತಾಸಕ್ತಿ ಕಾಪಾಡುವಲ್ಲಿ ಪೂರಕವಾಗಲಿದೆ. ನಿಜವಾಗಿ ಭಾರತಕ್ಕೆ ಬೇಕಾಗಿರುವುದು  ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜನಾಭಿಪ್ರಾಯ ಗಿಟ್ಟಿಸಿದ ಒಂದು ಶಿಕ್ಷಣ ನೀತಿಯಾಗಿದೆ, ಆದ್ದರಿಂದ ಹೊಸ ಶಿಕ್ಷಣ ನೀತಿಯನ್ನು ಸಾರಾಸಗಟಾಗಿ ತಿರಸ್ಕರಿಸಿ" ಎಂದು ಖ್ಯಾತ ಅಂಕಣಕಾರ ಹಾಗೂ ಪ್ರಗತಿಪರ ಚಿಂತಕರು ಶಿವಸುಂದರ್ ಅಭಿಪ್ರಾಯ ಪಟ್ಟಿದ್ದಾರೆ.

ಇತ್ತೀಚೆಗೆ ಇಂಡಿಯನ್ ಸೋಶೀಯಲ್  ಫೋರಂ ಕರ್ನಾಟಕ ರಾಜ್ಯ ಸಮಿತಿ  ದಮ್ಮಾಮ್ ಘಟಕವು ಆಯೋಜಿಸಿದ್ದ ಝೂಮ್ (ZOOM) ವೆಬಿನಾರ್ ಮಾಹಿತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

"ಪ್ರಜಾ ತಾಂತ್ರಿಕ ಸಂಸ್ಥೆಗಳು  ಅದರ ವ್ಯವಸ್ಥೆ ಹಾಗೂ  ಪ್ರಕ್ರಿಯೆಗಳಲ್ಲಿ ಒಳಪಟ್ಟು ತದನಂತರ ಜಾರಿಯಾಗ ಬೇಕಿರುವ ಶಿಕ್ಷಣ ನೀತಿಯನ್ನು ಕೋವಿಡ್ ಸಂದರ್ಭದಲ್ಲಿ ಜಾರಿಗೊಳಿಸಿರುವ ಅಗತ್ಯಾವದರೂ ಏನಿತ್ತು. ಭಾರತೀಯ ಸಂಸ್ಕೃತಿ ಅಥವಾ ಸಮಗ್ರ ಶಿಕ್ಷಣದ ಹೆಸರಲ್ಲಿ  ವೈದಿಕ ಬ್ರಾಹ್ಮಣಶಾಹಿ ವಾದವನ್ನು ನೆಲೆನಿಲ್ಲಿಸುವ ನಳಂದಾ ಅಥವಾ ತಕ್ಷ ಶಿಲಾದಲ್ಲಿನ ಶಿಕ್ಷಣ ನೀತಿಯ ಹುನ್ನಾರ ಅಡಗಿದೆ. ನಿಜವಾಗಿ ಭಾರತೀಯ ಪರಂಪರೆಯೊಂದಿಗೆ ಪ್ರೀತಿ ಇದ್ದರೆ, ಭಾರತದ ಅವಿಭಾಜ್ಯ ಭಾಗವಾಗಿದ್ದ ಚಾರ್ವಾಕ, ಕಣಾದ, ಬೌದ್ಧ ,ಜೈನ ಹಾಗೂ ಸೂಫೀ ಶಿಕ್ಷಣ ನೀತಿ ಗಳನ್ನು ಇಂದಿನ ಕಾಲಗಟ್ಟಕ್ಕಣು ಗುಣವಾಗಿ ನಡೆಸಲು ಸಫಲ ಪ್ರಯತ್ನ ವನ್ನಾದರೂ ಮಾಡಬೇಕಿತ್ತಲ್ಲವೇ? " ಎಂದು  ಪ್ರಸ್ತಾಪಿಸಿದರು.

ಸೌದಿಯಾದ್ಯಂತ ಅನಿವಾಸಿ ಭಾರತೀಯರಿಗೆ ರಾಜಕೀಯ ಪ್ರಜ್ಞಾವಂತಿಕೆಯನ್ನು ಮೂಡಿಸುವ ಸದುದ್ದೇಶದಿಂದ ಇಂಡಿಯನ್ ಸೋಶಿಯಲ್ ಫೋರಂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದು, ಇದರ ಭಾಗವೆಂಬಂತೆ  ಬೆಂಗಳೂರು ಆಸುಪಾಸಿನ ಆಯ್ದ ಅನಿವಾಸಿ ಗರಿಗಾಗಿ ಈ ವೆಬಿನಾರ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಮೊದಲಿಗೆ , ಇಂಡಿಯನ್ ಸೋಶಿಯಲ್ ಫೋರಂ ದಮ್ಮಾಮ್, ಕರ್ನಾಟಕ ರಾಜ್ಯ ಸಮಿತಿ ಉಪಾಧ್ಯಕ್ಷ ರಾದ ಸಲಾಹುದ್ದೀನ್ ತುಮಕೂರು ರವರು ಪ್ರಾಸ್ತಾವಿಕವಾಗಿ ಮಾತನಾಡಿ  ಸ್ವಾಗತಿಸಿದರೆ, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಇಮ್ರಾನ್ ಕಾಟಿಪಳ್ಳ ರವರು ಕೊನೆಯಲ್ಲಿ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)