varthabharthi


ಕ್ರೀಡೆ

ದಶಕದ ಏಕದಿನ ಆಟಗಾರರ ವಿಭಾಗದಲ್ಲಿ ಧೋನಿ, ರೋಹಿತ್ ಗೆ ಸ್ಥಾನ

ಐಸಿಸಿ ದಶಕದ ಆಟಗಾರರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ವಿರಾಟ್ ಕೊಹ್ಲಿ, ಅಶ್ವಿನ್

ವಾರ್ತಾ ಭಾರತಿ : 24 Nov, 2020

ದುಬೈ, ನ.24: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಮಂಗಳವಾರ ಐಸಿಸಿ ದಶಕದ ಆಟಗಾರ (ಐಸಿಸಿ ಪ್ಲೇಯರ್ ಆಫ್ ದಿ ಡಿಕೇಡ್) ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಕಳೆದ 10 ವರ್ಷಗಳಲ್ಲಿ ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಅಪೂರ್ವ ಪ್ರದರ್ಶನದ ಹಿನ್ನೆಲೆಯಲ್ಲಿ ಎಲ್ಲ ವಿಭಾಗಗಳಲ್ಲೂ ಸ್ಥಾನ ಪಡೆದಿದ್ದಾರೆ. ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಏಳು ಆಟಗಾರರಲ್ಲಿ ಭಾರತದ ಕೊಹ್ಲಿ ಮತ್ತು ಅನುಭವಿ ಆಫ್ ಸ್ಪಿನ್ನರ್ ಅಶ್ವಿನ್ ಸೇರಿದ್ದಾರೆ.

ಜೋ ರೂಟ್ (ಇಂಗ್ಲೆಂಡ್), ಕೇನ್ ವಿಲಿಯಮ್ಸನ್ (ನ್ಯೂಝಿಲ್ಯಾಂಡ್), ಸ್ಟೀವ್ ಸ್ಮಿತ್ (ಆಸ್ಟ್ರೇಲಿಯ), ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕ) ಮತ್ತು ಕುಮಾರ್ ಸಂಗಕ್ಕರ (ಶ್ರೀಲಂಕಾ) ಈ ವಿಭಾಗದಲ್ಲಿ ಸ್ಪರ್ಧೆಯಲ್ಲಿರುವ ಇತರ ದೇಶಗಳ ಆಟಗಾರರು.

ದಶಕದ ಏಕದಿನ ಆಟಗಾರರ ವಿಭಾಗದಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ರನ್ ಮೆಷಿನ್ ರೋಹಿತ್ ಶರ್ಮಾ ಕೂಡ ಸ್ಥಾನ ಪಡೆದಿದ್ದಾರೆ. ಕೊಹ್ಲಿ, ಲಸಿತ್ ಮಾಲಿಂಗ (ಶ್ರೀಲಂಕಾ), ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯ), ಡಿವಿಲಿಯರ್ಸ್ ಮತ್ತು ಸಂಗಕ್ಕರ ಅವರು ಈ ವಿಭಾಗದಲ್ಲಿ ಇದ್ದಾರೆ.

ಪುರುಷರ ಟ್ವೆಂಟಿ-20 ದಶಕದ ಆಟಗಾರರ ವಿಭಾಗದ ಸ್ಪರ್ಧೆಯಲ್ಲಿ ಕೊಹ್ಲಿ ಮತ್ತು ರೋಹಿತ್ ಶರ್ಮಾ(ಭಾರತ), ರಶೀದ್ ಖಾನ್ (ಅಫ್ಘಾನಿಸ್ತಾನ), ಇಮ್ರಾನ್ ತಾಹಿರ್ (ದಕ್ಷಿಣ ಆಫ್ರಿಕಾ), ಆ್ಯರನ್ ಫಿಂಚ್ (ಆಸ್ಟ್ರೇಲಿಯ), ಮಾಲಿಂಗ (ಶ್ರೀಲಂಕಾ) ಮತ್ತು ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) ಕಾಣಿಸಿಕೊಂಡಿದ್ದಾರೆ.

ದಶಕದ ಟೆಸ್ಟ್ ಆಟಗಾರ ಮತ್ತು ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿಗೆ ಕೊಹ್ಲಿ ನಾಮನಿರ್ದೇಶನ ಗೊಂಡಿದ್ದಾರೆ. ಇವರೊಂದಿಗೆ ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿಗೆ ಧೋನಿ ನಾಮನಿರ್ದೇಶನಗೊಂಡಿದ್ದಾರೆ.

ಎಲ್ಲಾ ಸ್ವರೂಪಗಳಲ್ಲಿ ಸರಾಸರಿ 50 ಕ್ಕಿಂತ ಹೆಚ್ಚು ರನ್ ದಾಖಲಿಸಿರುವ ಕೊಹ್ಲಿ ಈಗಾಗಲೇ 70 ಅಂತರ್‌ರಾಷ್ಟ್ರೀಯ ಶತಕಗಳನ್ನು ಗಳಿಸಿದ್ದಾರೆ. ಗರಿಷ್ಠ ಅಂತರ್‌ರಾಷ್ಟ್ರೀಯ ಶತಕ ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್ (100) ಮತ್ತು ರಿಕಿ ಪಾಂಟಿಂಗ್ (71) ಬಳಿಕ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಸಾರ್ವಕಾಲಿಕ ಗರಿಷ್ಠ ರನ್ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ (21,444 ) ಮೂರನೇ ಸ್ಥಾನದಲ್ಲಿದ್ದಾರೆ. ಪಾಂಟಿಂಗ್ (27,483) ಮತ್ತು ಸಚಿನ್ (34,357) ನಂತರದ ಸ್ಥಾನದಲ್ಲಿದ್ದಾರೆ.

ಕಳೆದ ಒಂದು ದಶಕದಲ್ಲಿ ಕೊಹ್ಲಿ ಟೆಸ್ಟ್ ಪಂದ್ಯಗಳಲ್ಲಿ 7,000 ರನ್ ಗಳಿಸಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತದ ನಾಯಕ ಏಕದಿನ ಪಂದ್ಯಗಳಲ್ಲಿ 11,000ಕ್ಕೂ ಹೆಚ್ಚು ರನ್ ಮತ್ತು ಟ್ವೆಂಟಿ-20 ಕ್ರಿಕೆಟ್‌ನಲ್ಲಿ 2,600 ರನ್ ಗಳಿಸಿದ್ದಾರೆ.

ಆಟಗಾರರು ಪಡೆಯುವ ಮತಗಳ ಆಧಾರದ ಮೇಲೆ ಅಂತಿಮ ವಿಜೇತರನ್ನು ನಿರ್ಧರಿಸಲಾಗುತ್ತದೆ.

ನಾಮನಿರ್ದೇಶನಗೊಂಡಿರುವ ಆಟಗಾರರು.

ದಶಕದ ಟೆಸ್ಟ್ ಆಟಗಾರ

ವಿರಾಟ್ ಕೊಹ್ಲಿ (ಭಾರತ)
ಕೇನ್ ವಿಲಿಯಮ್ಸನ್ (ನ್ಯೂಝಿಲ್ಯಾಂಡ್ )
ಸ್ಮಿತ್, (ಆಸ್ಟ್ರೇಲಿಯ)

ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್)

ರಂಗನಾ ಹೆರಾತ್ (ಶ್ರೀಲಂಕಾ) ಯಾಸಿರ್ ಷಾ (ಪಾಕಿಸ್ತಾನ)

ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ
ವಿರಾಟ್ ಕೊಹ್ಲಿ (ಭಾರತ)
ಕೇನ್ ವಿಲಿಯಮ್ಸನ್ (ನ್ಯೂಝಿಲ್ಯಾಂಡ್),
ಬ್ರೆಂಡನ್ ಮೆಕಲಮ್ (ನ್ಯೂಝಿಲ್ಯಾಂಡ್),
ಮಿಸ್ಬಾ-ಉಲ್-ಹಕ್ (ಪಾಕಿಸ್ತಾನ)
ಎಂ.ಎಸ್. ಧೋನಿ (ಭಾರತ)
ಅನ್ಯಾ ಶ್ರಬ್ಸೋಲ್ (ಇಂಗ್ಲೆಂಡ್)
ಕ್ಯಾಥರೀನ್ ಬ್ರಂಟ್ (ಇಂಗ್ಲೆಂಡ್)
ಮಹೇಲಾ ಜಯವರ್ಧನೆ (ಶ್ರೀಲಂಕಾ)
ಡೇನಿಯಲ್ ವೆಟೋರಿ (ನ್ಯೂಝಿಲ್ಯಾಂಡ್).

ದಶಕದ ಟ್ವೆಂಟಿ-20 ಆಟಗಾರ
ರಶೀದ್ ಖಾನ್ (ಅಫ್ಘಾನಿಸ್ತಾನ)
ವಿರಾಟ್ ಕೊಹ್ಲಿ (ಭಾರತ)
ಇಮ್ರಾನ್ ತಾಹಿರ್ (ದಕ್ಷಿಣ ಆಫ್ರಿಕಾ)
ಆ್ಯರನ್ ಫಿಂಚ್ (ಆಸ್ಟ್ರೇಲಿಯ)
ಲಸಿತ್ ಮಾಲಿಂಗ (ಶ್ರೀಲಂಕಾ)
ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್)
ರೋಹಿತ್ ಶರ್ಮಾ ( ಭಾರತ).

ದಶಕದ ಆಟಗಾರ

ವಿರಾಟ್ ಕೊಹ್ಲಿ (ಭಾರತ)

ರವಿಚಂದ್ರನ್ ಅಶ್ವಿನ್ (ಭಾರತ)
ಜೋ ರೂಟ್ (ಇಂಗ್ಲೆಂಡ್),
ಕೇನ್ ವಿಲಿಯಮ್ಸನ್ (ನ್ಯೂಝಿಲ್ಯಾಂಡ್ )
ಸ್ಟೀವ್ ಸ್ಮಿತ್ (ಆಸ್ಟ್ರೇಲಿಯ)
ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕ)
ಕುಮಾರ ಸಂಗಕ್ಕರ (ಶ್ರೀಲಂಕಾ)

ಏಕದಿನ ಆಟಗಾರ
ವಿರಾಟ್ ಕೊಹ್ಲಿ (ಭಾರತ)
ಲಸಿತ್ ಮಾಲಿಂಗ (ಶ್ರೀಲಂಕಾ)
ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯ)

ಎಬಿ ಡಿವಿಲಿಯರ್ಸ್,(ದ. ಆಫ್ರಿಕಾ)

ರೋಹಿತ್ ಶರ್ಮಾ (ಭಾರತ),

ಎಂ.ಎಸ್.ಧೋನಿ (ಭಾರತ)
ಮತ್ತು ಕುಮಾರ ಸಂಗಕ್ಕರ.

ದಶಕದ ಆಟಗಾರ್ತಿ

ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯ),

ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯ),
ಸುಝಿ ಬೇಟ್ಸ್ (ನ್ಯೂಝಿಲ್ಯಾಂಡ್),

ಸ್ಟಫಾನಿ ಟೇಲರ್ (ವೆಸ್ಟ್ ಇಂಡೀಸ್),
ಮಿಥಾಲಿ ರಾಜ್ (ಭಾರತ),

ಸಾರಾ ಟೇಲರ್ (ಇಂಗ್ಲೆಂಡ್).

ದಶಕದ ಏಕದಿನ ಆಟಗಾರ್ತಿ
ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯ)
ಎಲಿಸ್ ಪೆರ್ರಿ (ಆಸ್ಟ್ರೇಲಿಯ)
ಮಿಥಾಲಿ ರಾಜ್ (ಭಾರತ)
ಸುಝಿ ಬೇಟ್ಸ್ (ನ್ಯೂಝಿಲ್ಯಾಂಡ್)
ಸ್ಟಫಾನಿ ಟೇಲರ್ (ವೆಸ್ಟ್ ಇಂಡೀಸ್)

ಜುಲಾನ್ ಗೋಸ್ವಾಮಿ (ಭಾರತ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)