varthabharthi


ಅಂತಾರಾಷ್ಟ್ರೀಯ

ಟರ್ಕಿ ನ್ಯಾಯಾಲಯದಲ್ಲಿ ಆಪ್ತಮಿತ್ರನ ಹೇಳಿಕೆ

ಸೌದಿ ಯುವರಾಜನ ನಿಕಟವರ್ತಿಗಳಿಂದ ಖಶೋಗಿಗೆ ಬೆದರಿಕೆ

ವಾರ್ತಾ ಭಾರತಿ : 25 Nov, 2020

ಖಶೋಗಿ

ಇಸ್ತಾಂಬುಲ್ (ಟರ್ಕಿ), ನ. 24: ಸೌದಿ ಅರೇಬಿಯದ ಹತ ಪತ್ರಕರ್ತ ಜಮಾಲ್ ಖಶೋಗಿ, ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ಗೆ ನಿಕಟವಾಗಿರುವ ಜನರಿಂದ ಬೆದರಿಕೆಯನ್ನು ಎದುರಿಸುತ್ತಿದ್ದರು ಎಂದು ಖಶೋಗಿಯ ಆಪ್ತಮಿತ್ರ ಐಮಾನ್ ನೂರ್ ಟರ್ಕಿಯ ನ್ಯಾಯಾಲಯದಲ್ಲಿ ಮಂಗಳವಾರ ಹೇಳಿದ್ದಾರೆ.

ಐಮಾನ್ ನೂರ್ ಈಜಿಪ್ಟ್‌ನ ರಾಜಕೀಯ ಭಿನ್ನಮತೀಯರಾಗಿದ್ದಾರೆ ಹಾಗೂ ಖಶೋಗಿಯ ದೀರ್ಘಕಾಲೀನ ಗೆಳೆಯರಾಗಿದ್ದರು.

 ‘ವಾಶಿಂಗ್ಟನ್ ಪೋಸ್ಟ್’ನ ಅಂಕಣಕಾರರಾಗಿದ್ದ ಖಶೋಗಿಯನ್ನು 2018ರ ಅಕ್ಟೋಬರ್ 2ರಂದು ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ಉಸಿರುಗಟ್ಟಿಸಿ ಭೀಕರವಾಗಿ ಕೊಲೆಗೈಯಲಾಗಿತ್ತು.

ಈ ಕೊಲೆ ಸಂಬಂಧ ಸೌದಿ ಅರೇಬಿಯದ 26 ಶಂಕಿತರ ವಿಚಾರಣೆಯು ಅವರ ಅನುಪಸ್ಥಿತಿಯಲ್ಲಿ ಇಸ್ತಾಂಬುಲ್‌ನ ನ್ಯಾಯಾಲಯವೊಂದರಲ್ಲಿ ನಡೆಯುತ್ತಿದೆ.

ಸೌದಿ ರಾಜ ದರ್ಬಾರ್‌ನಲ್ಲಿ ಮಾಧ್ಯಮ ಪ್ರಮುಖನಾಗಿದ್ದ ಸೌದ್ ಅಲ್-ಖಹ್ತಾನಿ ಮತ್ತು ಆತನ ಕುಟುಂಬ ಸದಸ್ಯರಿಂದ ಖಶೋಗಿ ನಿರಂತರವಾಗಿ ಬೆದರಿಕೆ ಎದುರಿಸುತ್ತಿದ್ದರು ಎಂದು ಐಮಾನ್ ನ್ಯಾಯಾಲಯದಲ್ಲಿ ಹೇಳಿರುವುದಾಗಿ ಟರ್ಕಿ ಮಾಧ್ಯಮಗಳು ವರದಿ ಮಾಡಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)