varthabharthi


ರಾಷ್ಟ್ರೀಯ

ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ

ಐವರು ಹಿಂದೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಉವೈಸಿ ಪಕ್ಷ

ವಾರ್ತಾ ಭಾರತಿ : 27 Nov, 2020

ಹೊಸದಿಲ್ಲಿ: ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ ಐವರು ಹಿಂದೂಗಳನ್ನು ಕಣಕ್ಕಿಳಿಸಿದೆ.

ಈ ಬಾರಿಯ ಚುನಾವಣೆಯಲ್ಲಿ 51 ಸೀಟುಗಳಲ್ಲಿ ಎಐಎಂಐಎಂ ಸ್ಪರ್ಧಿಸಲಿದ್ದು, 10 ಶೇ. ಸೀಟುಗಳಲ್ಲಿ ಹಿಂದೂಗಳು ಸ್ಪರ್ಧಿಸಲಿದ್ದಾರೆ. ಹಿಂದೂ –ಮುಸ್ಲಿಂ ಜನಸಂಖ್ಯೆ 50 ಶೇ.ದಷ್ಟಿರುವ ಮತ್ತು ಎಐಎಂಐಎಂ ಶಾಸಕರಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

ಪುರಂಪುಲ್ ನಿಂದ ಸುನ್ನಮ್ ರಾಜ್ ಮೋಹನ್, ಫಲಕ್ನುಮಾದಿಂದ ತಾರಾ ಭಾಯಿ, ಕರ್ವಾನ್ ನಿಂದ ಮಂದಗಿರಿ ಸ್ವಾಮಿ, ಜಾಮ್ ಭಾಗ್ ನಿಂದ ಜಟಾಲ ರವೀಂದ್ರ ಮತ್ತು ರಂಗರೆಡ್ಡಿ ನಗರದಿಂದ ಎಟಿಯಾಲ ರಾಜೇಶ್ ಗೌಡ್ ಸ್ಪರ್ಧಿಸಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)