varthabharthi


ಕರಾವಳಿ

ಲಾಲಾಜಿ ಮೆಂಡನ್‌ಗೆ ಸಚಿವ ಸ್ಥಾನಕ್ಕೆ ಒತ್ತಾಯ

ವಾರ್ತಾ ಭಾರತಿ : 28 Nov, 2020

ಮಂಗಳೂರು, ನ.28: ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೊಟ್ಟಾರದ ಧರ್ಮ ರಕ್ಷಣಾ ಮೊಗವೀರ ವೇದಿಕೆ ಒತ್ತಾಯಿಸಿದೆ.

ಲಾಲಾಜಿ ಮೆಂಡನ್ 3 ಬಾರಿ ಶಾಸಕರಾಗಿ ಅಪಾರ ಅನುಭವ ಹೊಂದಿದ್ದಾರೆ. ವಿಧಾನಸಭೆಯಲ್ಲಿ ಮೊಗವೀರ ಸಮುದಾಯಕ್ಕೆ ಸೇರಿದ ಬಿಜೆಪಿಯ ಏಕೈಕ ಪ್ರತಿನಿಧಿಯಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ದುಡಿಯುತ್ತಿದ್ದು ಪ್ರಾಮಾಣಿಕ, ಸಜ್ಜನಿಕೆಯ ರಾಜಕಾರಣಿಯಾಗಿದ್ದಾರೆ. ಅವರಿಗೆ ಅರ್ಹವಾಗಿ ಸಚಿವ ಸ್ಥಾನ ದೊರೆಯಬೇಕು ಎಂದು ವೇದಿಕೆಯ ಅಧ್ಯಕ್ಷ ನಿಕೀತ್ ಎನ್.ಶ್ರೀಯಾನ್ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ಧರ್ಮರಕ್ಷಣಾ ಮೊಗವೀರ ವೇದಿಕೆಯ ಸಂಸ್ಥಾಪಕ ಹಾಗೂ ಸ್ಥಾಪಕಾಧ್ಯಕ್ಷ ನವೀನ್‌ಚಂದ್ರ ಶ್ರೀಯಾನ್, ಉಪಾಧ್ಯಕ್ಷ ಭರತ್ ಕುಮಾರ್ ಕೂಳೂರು, ವೇದಿಕೆಯ ಮಾರ್ಗದರ್ಶಕ ಗೋಪಿಚಂದ್ರ ಶ್ರೀಯಾನ್, ಮಹಿಳಾ ಧರ್ಮರಕ್ಷಣಾ ವೇದಿಕೆಯ ನಿರ್ದೇಶಕಿ ತುಳಸಿ ಎನ್.ಶ್ರೀಯಾನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)