varthabharthi


ರಾಷ್ಟ್ರೀಯ

2013ರಲ್ಲಿ ರೈತರ ಧರಣಿ ಕುರಿತು ರಾಜ್ ನಾಥ್ ಹೇಳಿಕೆಯ ವೀಡಿಯೊ ವೈರಲ್

ವಾರ್ತಾ ಭಾರತಿ : 28 Nov, 2020

ಹೊಸದಿಲ್ಲಿ: ರೈತರು ಧರಣಿ ಕೂತ್ತಿದ್ದಾರೆಂದು ನನಗೆ ಗೊತ್ತಾಗಿದ್ದರೆ ನಾನು ಮೊದಲೇ ಆಗಮಿಸುತ್ತಿದ್ದೆ ಎಂದು  ಬಿಜೆಪಿ ಹಿರಿಯ ನಾಯಕ ರಾಜ್ ನಾಥ್ ಸಿಂಗ್ 2013ರಲ್ಲಿ ಮಾಡಿರುವ ಭಾಷಣದ ವೀಡಿಯೊ ಈಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಈ ವೀಡಿಯೊದೊಂದಿಗೆ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ.

ಕೇಂದ್ರ ಸರಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸಿ ಪಂಜಾಬ್, ಹರ್ಯಾಣ ಸೇರಿದಂತೆ ಹಲವು ರಾಜ್ಯಗಳ ರೈತರು ದಿಲ್ಲಿಯಲ್ಲಿ ಆಂದೋಲನ ನಡೆಸುತ್ತಿದ್ದು, ಕೇಂದ್ರ ಸರಕಾರದ ಯಾವೊಬ್ಬ ಸಚಿವನೂ ರೈತರನ್ನು ಭೇಟಿಯಾಗಿಲ್ಲ. ಅದರ ಬದಲಾಗಿ ರೈತರೊಂದಿಗೆ ಮಾತುಕತೆ ನಡೆಸಲು ಸಿದ್ದ  ಎಂಬ ಹೇಳಿಕೆಯನ್ನು ನೀಡುವುದರಲ್ಲೇ ಮಗ್ನರಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)