varthabharthi


ಕ್ರೀಡೆ

ಕೊಹ್ಲಿ ಪಡೆ 20 ಓವರ್ ಅಂತ್ಯಕ್ಕೆ 126/2

ಎರಡನೇ ಏಕದಿನ: ಭಾರತಕ್ಕೆ 390 ರನ್ ಗುರಿ

ವಾರ್ತಾ ಭಾರತಿ : 29 Nov, 2020

ಸಿಡ್ನಿ: ಸತತ ಎರಡನೇ ಶತಕ ಸಿಡಿಸಿದ ಸ್ಟೀವನ್ ಸ್ಮಿತ್(104), ಉಳಿದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್(83), ಲ್ಯಾಬುಶೇನ್(70), ಆ್ಯರೊನ್ ಫಿಂಚ್(60)ಹಾಗೂ ಮ್ಯಾಕ್ಸ್‌ವೆಲ್(63)ಅರ್ಧಶತಕಗಳ ಕೊಡುಗೆಯ ನೆರವಿನಿಂದ ಆಸ್ಟ್ರೇಲಿಯ ತಂಡ ರವಿವಾರ ಇಲ್ಲಿ ನಡೆದ ಎರಡನೇ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಗೆಲುವಿಗೆ 390 ರನ್ ಗುರಿ ನೀಡಿದೆ.

ಸತತ ಎರಡನೇ ಬಾರಿ ಟಾಸ್ ಜಯಿಸಿದ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 389 ರನ್ ಗಳಿಸಿತು.

 ಗೆಲ್ಲಲು ಕಠಿಣ ಗುರಿ ಪಡೆದ ಭಾರತ 20 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್‌ಗಳ ನಷ್ಟಕ್ಕೆ 126 ರನ್ ಗಳಿಸಿದೆ. ನಾಯಕ ವಿರಾಟ್ ಕೊಹ್ಲಿ(ಔಟಾಗದೆ 35) ಹಾಗೂ ಶ್ರೇಯಸ್ ಐಯ್ಯರ್(30) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇನಿಂಗ್ಸ್ ಆರಂಭಿಸಿದ ಮಾಯಾಂಕ್ ಅಗರ್ವಾಲ್(28) ಹಾಗೂ ಶಿಖರ್ ಧವನ್(30)ದೊಡ್ಡ ಗಳಿಸಲು ವಿಫಲರಾದರು. ಮೊದಲ ವಿಕೆಟ್‌ಗೆ 56 ರನ್ ಸೇರಿಸಲಷ್ಟೇ ಶಕ್ತರಾದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)