varthabharthi


ರಾಷ್ಟ್ರೀಯ

ಡಿಸೆಂಬರ್ ಅಂತ್ಯಕ್ಕೆ ಹೊಸ ರಾಜಕೀಯ ಪಕ್ಷ ಘೋಷಣೆ :ರಜನೀಕಾಂತ್

ವಾರ್ತಾ ಭಾರತಿ : 3 Dec, 2020

ಚೆನ್ನೈ: ತನ್ನ ದೀರ್ಘ ಕಾಲದಿಂದ ನಿರೀಕ್ಷಿಸುತ್ತಿರುವ ರಾಜಕೀಯ ಪಕ್ಷದ ಕುರಿತು ಡಿ.31 ರಂದು ವಿವರಣೆ ನೀಡುವೆ. 2021ರ ಜನವರಿಯಲ್ಲಿ ಹೊಸ ಪಕ್ಷ ವನ್ನು ಆರಂಭಿಸಲಾಗುವುದು ಎಂದು ಗುರುವಾರ ಘೋಷಿಸಿರುವ ಸೂಪರ್ ಸ್ಟಾರ್ ಖ್ಯಾತಿಯ ರಜನೀಕಾಂತ್ ಹಲವು ಸಮಯಗಳಿಂದ ರಾಜಕೀಯ ಪ್ರವೇಶಕ್ಕೆ ಸಂಬಂಧಿಸಿ ಇದ್ದ ಊಹಾಪೋಹಕ್ಕೆ ತೆರೆ ಎಳೆದರು.

'ರಜನಿ ಮಕ್ಕಳ್ ಮಂದರಮ್' ವೇದಿಕೆಯ ಹಿರಿಯ ಪದಾಧಿಕಾರಿಗಳೊಂದಿಗೆ  ಕಳೆದ ಕೆಲವು ದಿನಗಳ ಹಿಂದೆ ಚೆನ್ನೈನಲ್ಲಿ ಸಭೆ ನಡೆಸಿದ್ದ ರಜನೀಕಾಂತ್ ಇಂದು ರಾಜಕೀಯ ಪಕ್ಷ ರಚಿಸುವ ಘೋಷಣೆ ಮಾಡಿದ್ದಾರೆ.

ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ತನ್ನ ಯೋಜನೆಯನ್ನು ಶೀಘ್ರವೇ ಪ್ರಕಟಿಸುವೆ ಎಂದು ಬುಧವಾರ ರಜನೀಕಾಂತ್ ಹೇಳಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)