varthabharthi


ರಾಷ್ಟ್ರೀಯ

ಶಾರ್ದೂಲ್ ಠಾಕೂರ್ ಗೆ ಅವಕಾಶ

ಆಸ್ಟ್ರೇಲಿಯ ವಿರುದ್ಧದ ಟಿ-20 ಸರಣಿಯಿಂದ ಜಡೇಜ ಔಟ್

ವಾರ್ತಾ ಭಾರತಿ : 5 Dec, 2020

ಮೆಲ್ಬೋರ್ನ್: ಗಾಯಗೊಂಡಿರುವ ರವೀಂದ್ರ ಜಡೇಜ ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ-20 ಸರಣಿಯ ಇನ್ನುಳಿದ 2 ಪಂದ್ಯಗಳಿಂದ ಹೊರಗುಳಿದಿದ್ದು, ಜಡೇಜರಿಂದ ತೆರವಾದ ಸ್ಥಾನವನ್ನು ವೇಗದ ಬೌಲರ್ ಶಾರ್ದೂಲ್ ಠಾಕೂರ್ ತುಂಬಲಿದ್ದಾರೆ.

ಕ್ಯಾನ್ ಬೆರಾದಲ್ಲಿ ಶುಕ್ರವಾರ ನಡೆದಿದ್ದ ಮೊದಲ ಟ್ವೆಂಟಿ-20 ಪಂದ್ಯದ ವೇಳೆ ಮಿಚೆಲ್ ಸ್ಟಾರ್ಕ್ ಎಸೆದ ಅಂತಿಮ ಓವರ್ ನಲ್ಲಿ ಬೌನ್ಸರ್ ವೊಂದು ಜಡೇಜ ಹೆಲ್ಮೆಟ್ ಗೆ ಅಪ್ಪಳಿಸಿದ ಪರಿಣಾಮ ತಲೆಗೆ ಗಾಯವಾಗಿತ್ತು. ಹೀಗಾಗಿ ಪಂದ್ಯದ ಮಧ್ಯೆವೇ ಗಾಯಗೊಂಡಿದ್ದ ಜಡೇಜ ಬದಲಿಗೆ ಯಜುವೇಂದ್ರ ಚಹಾಲ್ ರನ್ನು ಭಾರತದ 2ನೇ ಇನಿಂಗ್ಸ್ ನಲ್ಲಿ ಕಣಕ್ಕಿಳಿಸಲು ರೆಫರಿ ಸಮ್ಮಿತಿ ನೀಡಿದ್ದರು.

ಜಡೇಜ ಅವರ ಗಾಯದ ಮೇಲೆ ನಿಗಾ ಇಡಲಾಗುವುದು. ಶನಿವಾರ ಬೆಳಗ್ಗೆ ಮತ್ತೆ ತಪಾಸಣೆ ನಡೆಸಿದ ಬಳಿಕ ಅಗತ್ಯವಿದ್ದರೆ ಮತ್ತೆ ಸ್ಕ್ಯಾನಿಂಗ್ ಮಾಡಲಾಗುವುದು. ಈಗ ನಡೆಯುತ್ತಿರುವ ಟಿ-20 ಸರಣಿಯಲ್ಲಿ ಜಡೇಜ ಆಡುವುದಿಲ್ಲ ಎಂದು ಬಿಸಿಸಿಐ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಜಡೇಜ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ನಿರ್ಣಾಯಕ ಔಟಾಗದೆ 44 ರನ್ ಗಳಿಸಿದ್ದು, ಇವರ ನೆರವಿನಿಂದ ಭಾರತವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 161 ರನ್ ಗಳಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)